ಕ್ರಿಕೆಟ್ ಬ್ಯಾಟ್ ಖರೀದಿಗೆ ಹಾಲು ವ್ಯಾಪಾರಿಯಾಗಿದ್ದ ರೋಹಿತ್ ಶರ್ಮಾ!

ನವದೆಹಲಿ, ಮಾ.28- ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಮ್ಮ ಆರಂಭಿಕ ಜೀವನದಲ್ಲಿ ಬ್ಯಾಟ್ ಖರೀದಿಸುವ ಸಲುವಾಗಿ ಹಾಲು ವ್ಯಾಪಾರ ಮಾಡಿದ್ದರು ಎಂದು ಐಪಿಎಲ್ ಮಂಡಳಿ ಸದಸ್ಯ, ಆಫ್ ಸ್ಪಿನ್ನರ್ ಪ್ರಜ್ಞಾನ್ ಓಝಾ ಹೇಳಿಕೆ ನೀಡಿದ್ದಾರೆ. ನಾನು ಹಾಗೂ ರೋಹಿತ್ ಶರ್ಮಾ ಅವರು 2008ರ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಪರ ಆಡಿದ್ದೆವು, ನಂತರದ ವರ್ಷದಲ್ಲಿ ಒಟ್ಟಿಗೆ ಚಾಂಪಿಯನ್ ಆಗಿ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ದೆವು ಎಂದು ಓಝಾ […]
500 ಹೊಸ ವಿಮಾನ ಖರೀದಿಸಲು ಮುಂದಾದ ಏರ್ ಇಂಡಿಯಾ

ಬೆಂಗಳೂರು,ಫೆ.11- ಹೊಸ ಮಾಲಿಕತ್ವದ ಏರ್ ಇಂಡಿಯಾ ಸಂಸ್ಥೆ ಇದೇ ಮೊದಲ ಬಾರಿಗೆ 100 ಶತಕೋಟಿ ಮೌಲ್ಯದ 500 ಹೊಸ ವಿಮಾನಗಳನ್ನು ಖರೀದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಫ್ರಾನ್ಸ್‍ನ ಏರ್‍ಬಸ್ ಹಾಗೂ ಬೋಯಿಂಗ್ ಸಂಸ್ಥೆಗಳಿಂದ 500 ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಏರ್ ಇಂಡಿಯಾ ಸಹಿ ಹಾಕಿದೆ ಎಂದು ವೈಮಾನಿಕ ಕ್ಷೇತ್ರದ ಮೂಲಗಳು ತಿಳಿಸಿವೆ. ಏರ್‍ಬಸ್ ಸಂಸ್ಥೆಯಿಂದ ವಿವಿಧ ನಮೂನೆಗಳ 250 ಹಾಗೂ ಬೋಯಿಂಗ್ ಸಂಸ್ಥೆಯಿಂದ 220 ವಿಮಾನಗಳನ್ನು ಖರೀದಿ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಟಾಟಾ ಸಂಸ್ಥೆ […]
ಇರೋ ಬಸ್ಸುಗಳಿಗೆ ಚಾಲಕರಿಲ್ಲ, ಬಿಎಂಟಿಸಿಗೆ ಹೊಸ ಬಸ್ ಖರೀದಿ ಅವಶ್ಯಕತೆ ಏನಿತ್ತು.. ?

ಬೆಂಗಳೂರು,ನ.17- ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಜುಟ್ಟಿಗೆ ಮಲ್ಲಿಗೆ ಹೂ ಬೇಕು ಅಂತರಲ್ಲ ಅನ್ನೋ ಗಾದೆ ಮಾತಿನ ಹಾಗೆ ಈಗಾಗಲೇ ನಷ್ಟದಲ್ಲಿದ್ದು ಮತ್ತೆ ಹೊಸ ಬಸ್‍ಗಳನ್ನು ಖರೀದಿ ಮಾಡಲು ಬಿಎಂಟಿಸಿ ಮುಂದಾಗಿದೆ.ಸದ್ಯ ಬಿಎಂಟಿಸಿಯಲ್ಲಿ 6500 ಬಸ್‍ಗಳು ಸಂಚರಿಸುತ್ತಿವೆ. ಈ ಬಸ್‍ಗಳ ಸಂಖ್ಯೆಯನ್ನು 10 ಸಾವಿರಕ್ಕೆ ಹೆಚ್ಚಿಸಲು ಬಿಎಂಟಿಸಿ ಪ್ಲಾನ್ ಹಾಕಿಕೊಂಡಿದೆ. ಈಗ ಇರುವ 6500 ಬಸ್‍ಗಳಿಗೆ ಚಾಲಕರು ಸಿಗದೆ ಹಲವಾರು ರೂಟ್‍ಗಳನ್ನು ಬಿಎಂಟಿಸಿ ನಿಗಮ ಕ್ಯಾನ್ಸಲ್ ಮಾಡುತ್ತಿದೆ. ಆದರೂ ಹೊಸ ಬಸ್ ಖರೀದಿಗೆ ಉತ್ಸಾಹ ತೋರುತ್ತಿರುವುದು ಯಾಕೆ ಅನ್ನೋದು […]
ಬಿಜೆಪಿ ಸೇರುವಂತೆ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದ್ದ ಮೂವರ ಬಂಧನ
ಹೈದರಬಾದ್,ಅ.27- ತೆಲಂಗಾಣದ ಆಡಳಿತ ಪಕ್ಷದ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಕುದುರೆ ವ್ಯಾಪಾರ ನಡೆಸಲು ಯತ್ನಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಫಾರಂಹೌಸ್‍ನಿಂದ ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ಹರಿಯಾಣದ ಫರೀದಾಬಾದ್ನಲ್ಲಿ ಅರ್ಚಕರಾಗಿರುವ ಸತೀಶ್ ಶರ್ಮಾ (33), ತಿರುಪತಿಯಲ್ಲಿ ಮಠವೊಂದರ ಪೀಠಾಪತಿ ಡಿ.ಸಿಂಹಯಾಜಿ (45), ಸ್ವಾಮೀಜಿಯ ಭಕ್ತರಾದ ರೋಹಿತ್ ರೆಡ್ಡಿ ಹಾಗೂ ಸರೂರ್ನಗರದ ಉದ್ಯಮಿ ನಂದಕುಮಾರ್ (48) ಬಂಧಿತರು. ಶಾಸಕರಾದ ಪಿ.ರೋಹಿತ್ ರೆಡ್ಡಿ, ಭೀರಾಮ್ ಹರ್ಷವರ್ಧನ್ ರೆಡ್ಡಿ, ಪಿ.ರೇಗಾ ಕಾಂತ ರಾವ್, ಗುವ್ವಾಲಾ ಬಾಲರಾಜು ಅವರು ತಮಗೆ ಬಿಜೆಪಿ […]
ರಷ್ಯಾದ ಇಂಧನ ಖರೀದಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಹರ್ದೀಪ್ ಸಿಂಗ್

ನವದೆಹಲಿ,ಅ.8- ತಮಗೆ ಅವಶ್ಯವಿರುವ ಇಂಧನವನ್ನು ಯಾವ ದೇಶದಿಂದ ಬೇಕಾದರೂ ನಾವು ಖರೀದಿಸುತ್ತೇವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾವುದೇ ದೇಶ ರಷ್ಯಾದಿಂದ ತೈಲ ಖರೀದಿಸಬಾರದು ಎಂದು ನಮಗೆ ಹೇಳಿಲ್ಲ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್‍ಸಿಂಗ್ ಪುರಿ ಹೇಳಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ನಂತರ ಜಾಗತಿಕ ಇಂಧನ ವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಪ್ರಪಂಚದಾದ್ಯಂತದ ಇಂಧನಕ್ಕಾಗಿ ಹಾಹಾಕಾರ ಎದ್ದಿದೆ. ನಾವು ನಮ್ಮ ದೇಶದ ನಾಗರೀಕರ ಹಿತದೃಷ್ಟಿಯಿಂದ ರಷ್ಯಾದಿಂದ ಇಂಧನ ಅಮುದು ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು. ಉಕ್ರೇನ್ ಮೇಲಿನ ದಾಳಿಯ ನಂತರ […]
ಭಾರತದ ಫೋರ್ಡ್ ಕಂಪನಿಯನ್ನು ಖರೀದಿಸಿದ ಟಾಟಾ ಸಂಸ್ಥೆ
ನವದೆಹಲಿ, ಆ. 8- ಆಟೋ ಮೊಬೈಲ್ ದಿಗ್ಗಜ ಸಂಸ್ಥೆ ಟಾಟಾ ಮೋಟರ್ಸ್ ಈಗ ಭಾರತದಲ್ಲಿನ ಅಮೆರಿಕ ಮೂಲದ ಫೋರ್ಡ್ ಕಂಪೆನಿಯ ಸ್ವತ್ತನ್ನು ಖರೀದಿಸಲು ಮುಂದಾಗಿದೆ. ಭಾರತದಲ್ಲಿರುವ ಕಾರ್ಖಾನೆಗಳು, ಉಪಕರಣಗಳು ಹಾಗೂ ಸಿಬ್ಬಂದಿಗಳನ್ನು ಟಾಟಾ ಸಮೂಹ ಸಂಪೂರ್ಣವಾಗಿ ಸುಮಾರು 7.26 ಬಿಲಿಯನ್ ರೂ.ಗಳಿಗೆ ಖರೀದಿಸುವ ಪ್ರಕ್ರಿಯೆ ನಡೆದಿದೆ. ಈಗಾಗಲೇ ಜಾಗ್ವರ್, ಲ್ಯಾಂಡ್ ರೋವರ್‍ನ್ನು ಸ್ವಾೀಧಿನಪಡಿಸಿ ಕೊಂಡಿರುವ ಟಾಟಾ ಜಾಗತಿಕವಾಗಿ ತನ್ನ ಪ್ರಮುಖ್ಯತೆಯನ್ನು ಹೆಚ್ಚಿಸಿ ಕೊಳ್ಳುವ ನಿಟ್ಟಿನಲ್ಲಿ ಭಾರತದಲ್ಲಿನ ಫೋರ್ಡ್ ಕಂಪೆನಿಯ ಸ್ವತ್ತನ್ನು ತನ್ನ ವ್ಯಾಪ್ತಿಗೆ ವಿಲೀನಗೊಳಿಸಿಕೊಳ್ಳುತ್ತಿದೆ. ಗುಜರಾತ್‍ನ ಪಶ್ಚಿಮ […]
ರಷ್ಯಾವನ್ನು ಕೊಂಡಾಡಿದ ಬ್ರೆಜಿಲ್
ವಿಶ್ವಸಂಸ್ಥೆ, ಜುಲೈ 13 -ರಷ್ಯಾದಿಂದ ಎಷ್ಟು ಸಾಧ್ಯವೋ ಅಷ್ಟು ಡೀಸೆಲ್ ಇಂಧನವನ್ನು ಖರೀದಿಸಲು ನಾವು ಬಯಸುತ್ತೇವೆ ಎಂದು ಬ್ರೆಜಿಲ್‍ನ ವಿದೇಶಾಂಗ ಸಚಿವ ಕಾರ್ಲೋಸ್ ಫ್ರಾಂಕಾ ಹೇಳಿದೆ. ಬ್ರೆಜಿಲ್‍ನಲ್ಲಿ ತಲೆದೊರಿರುವ ಡೀಸೆಲ್ ಕೊರತೆಯನ್ನು ನೀಗಿಸಲು ಒಪ್ಪಂದದ ನಂತರ ರಷ್ಯಾಸಹಾಯವನ್ನು ಕೊಂಡಾಡಿದ್ದಾರೆ.ರಷ್ಯಾದ ಡೀಸೆಲ್ 60 ದಿನಗಳಲ್ಲಿ ನಮಗೆ ಸಿಗಬಹುದು ಆಗ್ಗದ ದರದಲ್ಲಿ ಇಂಧನ ಸಿಗುತ್ತಿರುವುದು ಖಷಿಯಾಗಿದೆ ಅವರು ಮನಗೆ ಒಳ್ಳೆಯ ಪಾಲುದಾರರು ಎಂದು ಬಣ್ಣಿಸಿದ್ದಾರೆ. ಪ್ರಪಂಚದಾದ್ಯಂತ ವ್ಯಾಪಾರವನ್ನು ರಷ್ಯಾ ಮುಂದುವರೆಸಿದೆ ಭಾರತ, ಚೀನಾ ,ದಕ್ಷಿಣ ಆಫ್ರಿಕಾ ಗುಂಪಿನಲ್ಲಿ ಬ್ರೆಜಿಲ್ ಜೊತೆಗೂಡಿದೆ […]