RSS ದೇಶಭಕ್ತ ಸಂಘಟನೆ : ಸಿದ್ದುಗೆ ಸಿ.ಟಿ.ರವಿ ಗುದ್ದು

ಹಾಸನ.ಸೆ.29- ಆರ್‌ಎಸ್‌ಎಸ್‌ ಒಂದು ದೇಶ ಭಕ್ತ ಸಂಘಟನೆಯಾಗಿದೆ. ಭಾರತ ಭಾರತವಾಗಿ ಉಳಿಯಬೇಕೆಂದು ಬಯಸುತ್ತದೆ. ಆದರೆ, ದೇಶ ಭಕ್ತನ ಜೊತೆ ದೇಶ ದ್ರೋಹಿಗಳಿಗೆ ಓಲಿಸೋದು ಅಕ್ಷಮ್ಯ ಅಪರಾಧ. ತಲೆ ಸರಿ ಇದ್ದವರು ಹೋಲಿಕೆ ಮಾಡುತ್ತಾರೆಯೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಬೇಲೂರು ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತವನ್ನು ಮೊಘಲ್ ಇಸ್ಲಾಮ್ ಮಾಡಿ ಹಿಂದುಗಳನ್ನೆಲ್ಲ ಸರ್ವನಾಶ ಮಾಡಬೇಕೆಂದು ಬಯಸೋದು ಪಿಎಫ್‌ಐ ಎಂದು ಎಲ್ಲರಿಗೂ ಗೊತ್ತು. ಆದರೆ, ಆರ್‍ಎಸ್‍ಎಸ್ ಅನ್ನು ಅದಕ್ಕೆ ಹೋಲಿಕೆ […]