ಫೋಟೋ ಸ್ಟುಡಿಯೋದಲ್ಲಿ ಕ್ಯಾಮೆರಾ ಕದ್ದಿದ್ದ ಆರೋಪಿ ಅರೆಸ್ಟ್

ಬೆಂಗಳೂರು, ಮಾ.6- ಬಾಡಿಗೆಗೆ ಕ್ಯಾಮೆರಾ ಬೇಕೆಂದು ಫೋಟೋ ಸ್ಟುಡಿಯೋಗೆ ಬಂದು ಕ್ಯಾಮೆರಾಗಳನ್ನು ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಆರೋಪಿ ಯೊಬ್ಬನನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿ ಸುಮಾರು 3.65 ಲಕ್ಷ ಬೆಲೆ ಬಾಳುವ 4 ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ. ಮಾಲೂರಿನ ನಿವಾಸಿ ಪುರುಷೋತ್ತಮ್ ಬಂಧಿತ ಆರೋಪಿ. ಈತ ಮೂಲತಃ ತಮಿಳುನಾಡಿನವನು. ಅಪರಿಚಿತ ವ್ಯಕ್ತಿಯೊಬ್ಬ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ಟುಡಿಯೋವೊಂದಕ್ಕೆ ಬಂದು ಬಾಡಿಗೆಗೆ ಕ್ಯಾಮೆರಾ ಬೇಕೆಂದು ಬಂದು ಸ್ಟುಡಿಯೋದಲ್ಲಿದ್ದ ಸುಮಾರು 50,000ರೂ. ಬೆಲೆ ಬಾಳುವ ಸೋನಿ ಎ-7 ಎಸ್-2 ಕ್ಯಾಮೆರಾವನ್ನು […]