4 ದಿಕ್ಕುಗಳಿಂದಲೂ ರಥಯಾತ್ರೆಗೆ ಬಿಜೆಪಿ ಸಿದ್ಧತೆ

ಬೆಂಗಳೂರು,ಜ.17- ಬರಲಿರುವ ವಿಧಾನಸಭೆ ಚುನಾವಣೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಬಿಜೆಪಿ ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ರಥಯಾತ್ರೆ ಮೂಲಕ ಪಾಂಚಜನ್ಯ ಮೊಳಗಿಸಲಿದೆ. ಉತ್ತರಪ್ರದೇಶ, ಗುಜರಾತ್‍ನಲ್ಲಿ ಇದೇ ತಂತ್ರವನ್ನು ಅನುಸರಿಸಿ ಯಶಸ್ವಿಯಾಗಿದ್ದ ಬಿಜೆಪಿ ಕರ್ನಾಟಕದಲ್ಲೂ ನಾಲ್ಕು ದಿಕ್ಕಿನಲ್ಲಿ ರಥಯಾತ್ರೆ ಮೂಲಕ ಪ್ರಚಾರ ನಡೆಸಿ ಮತದಾರರ ಓಲೈಕೆಗೆ ಕಸರತ್ತು ನಡೆಸಲಿದೆ. ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳನ್ನು ಒಳಗೊಂಡ ಒಟ್ಟು ನಾಲ್ಕು ಕಡೆ ರಥಯಾತ್ರೆ ನಡೆಯಲಿದ್ದು, ಇಂದು ದಿನಾಂಕ ನಿಗದಿಯಾಗಲಿದೆ. ಈ ರಥಯಾತ್ರೆಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ […]