ಸೋಲಿನ ಭೀತಿ, ಕ್ಷೇತ್ರ ಗೊಂದಲ, ಸಿದ್ದರಾಮಯ್ಯ ಅತಂತ್ರ

ಬೆಂಗಳೂರು,ಮಾ.18- ವಿಧಾನಸಭೆ ಚುನಾವಣೆ ಯಲ್ಲಿ ಸ್ರ್ಪಧಿಸುವ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಳ್ಳುತ್ತಿದ್ದಂತೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ಬಗ್ಗೆ ಗೊಂದಲಗಳು ಸೃಷ್ಟಿಯಾಗಿವೆ. ಈ ಮೊದಲು ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಅಲ್ಲಿ ಗೆಲುವಿನ ಸಾಧ್ಯತೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಖುದ್ದು ಹೈಕಮಾಂಡ್ ಸುರಕ್ಷಿತ ಕ್ಷೇತ್ರ ಆಯ್ದುಕೊಳ್ಳುವಂತೆ ಸಲಹೆ ನೀಡಿದೆ ಎನ್ನಲಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ರ್ಪಧಿಸಿದ್ದರು. ಚಾಮುಂಡೇಶ್ವರಿ ಯಲ್ಲಿ ಸೋಲು […]

2024ರ ಅಮೆರಿಕ ಅಧ್ಯಕ್ಷೀಯ ಚುನಾವನೆಯಲ್ಲಿ ಟ್ರಂಪ್ ಸ್ಪರ್ಧೆ

ವಾಷಿಂಗ್ಟನ್,ನ.16-ಮುಂದಿನ 2024ರ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ರ್ಪಧಿಸುವುದಾಗಿ ಡೊನಾಲ್ಡ ಟ್ರಂಪ್ ಘೋಷಿಸಿದ್ದಾರೆ. ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠ ಮತ್ತು ವೈಭವಯುತ ಮಾಡಲು,ಯಾರೂ ಎದುರಾಳಿಗಳಿಲ್ಲದಂತೆ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷವನ್ನು ಸೋಲಿಸುವ ಗುರಿ ಹೊಂದಿರುವುದಾಗಿ ಫ್ಲೋರಿಡಾದಲ್ಲಿ ಸುಮಾರು 400 ಆಹ್ವಾನಿತ ಅತಿಥಿಗಳ ಮುಂದೆ ಘೋಷಿಸಿದರು. ಘೋಷಣೆ ಮಾಡುವ ಮೊದಲು ಟ್ರಂಪ್ ಅವರು, ಫೆಡರಲ್ ಚುನಾವಣಾ ಆಯೋಗಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು ಎಂದು ಬೆಂಬಲಿಗರು ತಿಳಿಸಿದ್ದಾರೆ. ಅಮೆರಿಕ ಜನತೆ ನಿಜವಾದ ವೈಭವವನ್ನು ಜಗತ್ತು ಇನ್ನೂ ನೋಡಿಲ್ಲ . ನಾವು […]