ಬೈಕ್‍ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಸ್ನೇಹಿತರ ದುರ್ಮರಣ

ಬೆಂಗಳೂರು, ಜ.17- ಅತಿ ವೇಗವಾಗಿ ಮುನ್ನುಗ್ಗಿ ಬಂದ ಕ್ಯಾಂಟರ್ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಸವಾರರ ಮೇಲೆ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಸಂಭವಿಸಿದೆ. ಮಾಗಡಿ ತಾಲೂಕಿನ ತೂಬಿನಗೆರೆಯ ನಿವಾಸಿಗಳಾದ ರವಿ(22) ಮತ್ತು ವಿಕಾಸ್(20) ಮೃತಪಟ್ಟ ಸವಾರರು.ಇವರಿಬ್ಬರು ಸ್ನೇಹಿತರಾಗಿದ್ದು, ಸುಂಕದಕಟ್ಟೆಯಲ್ಲಿ ವಾಸವಾಗಿದ್ದುಕೊಂಡು ಕಾರು ಶೋ ರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಇವರಿಬ್ಬರು ದೊಡ್ಡ ಗೊಲ್ಲರಹಟ್ಟಿ ಕಡೆಗೆ ಹೋಗಿ ವಾಪಸ್ ಬೈಕ್‍ಲ್ಲಿ ರಾತ್ರಿ 8 ಗಂಟೆ ಸುಮಾರಿಗೆ […]