ಇದೊಂದು ಸ್ಮರಣೀಯ ಕ್ಷಣ : ಮುಂಬೈ ಇಂಡಿಯನ್ಸ್ ನಾಯಕಿ

ಮುಂಬೈ, ಮಾ. 27- ಚೊಚ್ಚಲ ಮಹಿಳಾ ಪ್ರೀಮಿಯರ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದಿರುವುದು ನನ್ನ ಜೀವನದಲ್ಲಿ ಸ್ಮರಣೀಯ ಕ್ಷಣವಾಗಿದೆ’ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್ ಅವರು ಹೇಳಿದ್ದಾರೆ. ಪಂದ್ಯ ಮುಗಿದ ನಂತರ ನಡೆದ ಫೋಸ್ಟ್ ಪ್ರೆಸ್ಟೆಂಟೇಷನ್ ವೇಳೆ ಮಾತನಾಡಿದ ಅವರು, ಮಹಿಳಾ ಪ್ರೀಮಿಯರ್ ಲೀಗ್‍ಗಾಗಿ ನಾವು ಹಲವು ವರ್ಷಗಳಿಂದ ಎದುರು ನೋಡುತ್ತಿದ್ದೆವು, ಈಗ ಚೊಚ್ಚಲ ಲೀಗ್‍ನಲ್ಲೇ ಟ್ರೋಫಿ ಗೆದ್ದು ಸಂಭ್ರಮಿಸಿದ್ದೇವೆ ಎಂದು ಕೌರ್ ತಮ್ಮ […]

5 ವರ್ಷಗಳ ನಂತರ ನಾಯಕ ಪಟ್ಟ ಅಲಂಕರಿಸಿದ ಸ್ಟೀವನ್ ಸ್ಮಿತ್

ನವದೆಹಲಿ, ಮಾ. 14- ಬಾರ್ಡರ್- ಗವಾಸ್ಕರ್ ಸರಣಿ ಯಲ್ಲಿ 2-1 ಅಂತರದಿಂದ ಟ್ರೋಫಿ ಕಳೆದುಕೊಂಡಿರುವ ಆಸ್ಟ್ರೇಲಿಯಾ ಈಗ ಏಕದಿನ ಸರಣಿಯತ್ತ ಚಿತ್ತ ಹರಿಸಿದ್ದು ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಭಾರತ ವಿರುದ್ಧ ಟೆಸ್ಟ್ ಸರಣಿಯ ವೇಳೆಯೇ ನಾಯಕ ಪ್ಯಾಟ್ ಕಮ್ಮಿನ್ಸ್ ತಂಡವನ್ನು ತೊರೆದ ನಂತರ ಕಾಂಗೂರು ಪಡೆಯ ಸಾರಥ್ಯ ವಹಿಸಿ ತಮ್ಮ ನಾಯಕತ್ವದ ಕೌಶಲ್ಯ ಬಳಿಸಿ ಇಂಧೋರ್ ಟೆಸ್ಟ್ ಗೆದ್ದು, ಅಹಮದಾಬಾದ್ ಟೆಸ್ಟ್‍ನಲ್ಲಿ ಡ್ರಾ ಸಾಧಿಸುವಲ್ಲಿ ಸಹಕರಿಸಿದ್ದ ಸ್ಟೀವನ್ ಸ್ಮಿತ್ ಅವರಿಗೆ ಏಕದಿನ ಸಾರಥ್ಯವನ್ನು ವಹಿಸಲಾಗಿದೆ. ಕಮ್ಮಿನ್ಸ್‍ಗೆ ವಿಶ್ರಾಂತಿ:ಪ್ಯಾಟ್ […]

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಗೆ ಮಾತೃ ವಿಯೋಗ

ಸಿಡ್ನಿ, ಮಾ. 10- ದೀರ್ಘ ಕಾಲದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್‍ರ ತಾಯಿ ಇಂದು ಬೆಳಗ್ಗೆ ವಿವಶರಾಗಿದ್ದಾರೆ. ತಮ್ಮ ನೆಚ್ಚಿನ ನಾಯಕ ಪ್ಯಾಟ್ ಕಮಿನ್ಸ್‍ರ ತಾಯಿ ಮರಿಯಾ ಮೃತರಾದ ಹಿನ್ನೆಲೆಯಲ್ಲಿ ಗೌರವ ಸಲ್ಲಿಸುವ ಭಾರತ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಆಟಗಾರರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ ಆಡುವ ಮೂಲಕ ಗೌರವ ಸೂಚಿಸಿದ್ದಾರೆ. 2005 ರಿಂದಲೂ ಮರಿಯಾ ಅವರು ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಕಳೆದ ಕೆಲವು […]

ಸಿಎಸ್‍ಕೆಗೆ ಧೋನಿಯೇ ಬಾಸ್

ಚೆನ್ನೈ, ಸೆ. 4- ಹಾಲಿ ಚಾಂಪಿಯನ್ ಆಗಿದ್ದರೂ ಕೂಡ ನಾಯಕತ್ವದ ನಿರ್ಧಾರದಿಂದಾಗಿ 2022ರ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್‍ಕೆ ಮುಂದಿನ ಐಪಿಎಲ್ ಋತುವಿನಲ್ಲಿ ಚಾಂಪಿಯನ್ ಆಗಲು ಈಗಾಗಲೇ ರಣತಂತ್ರ ಹೆಣೆಯಲು ಸಜ್ಜಾಗಿದೆ. ಇಂದು ನಡೆದ ಪತ್ರಿಕಾಗೋಷ್ಠಿ ಯಲ್ಲಿ ಸಿಎಸ್‍ಕೆ ತಂಡದ ಸಿಇಒ ಕಾಸಿ ವಿಶ್ವನಾಥ್ ಅವರು ತಂಡದ ನಾಯಕತ್ವ ಹಾಗೂ ಮುಂಬರುವ ಐಪಿಎಲ್ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‍ನ ತಂಡದ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು. 2022ರ ಐಪಿಎಲ್ ನಡೆಯಲು ಒಂದು ದಿನ ಬಾಕಿ ಇರುವಾಗಲೇ […]