ಗಡಿ ದಾಟಿದ ಬಿಎಸ್‍ಎಫ್ ಯೋಧನನ್ನ ವಶಕ್ಕೆ ಪಡೆದ ಪಾಕ್

ನವದೆಹಲಿ,ಡಿ.8- ಪಂಜಾಬ್ ಗಡಿಯಲ್ಲಿ ಅಜಾಗರೂಕತೆಯಿಂದ ಪಾಕಿಸ್ತಾನದ ಭೂಮಿ ಪ್ರವೇಶಿಸಿದ ಭಾರತೀಯ ಗಡಿ ಭದ್ರತಾ ಪಡೆ ಯೋಧನನ್ನು ಪಾಕ್ ರೇಂಜರ್‍ಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಯೋಧನ ಹಸ್ತಾಂತರಕ್ಕಾಗಿ ಕಾಯಲಾಗುತ್ತಿದೆ ಎಂದು ಬಿಎಸ್‍ಎಫ್‍ ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‍ನ ಅಬೋಹರ್ ಸೆಕ್ಟರ್‍ನಲ್ಲಿ ಕಳೆದ ವಾರ ಡಿಸೆಂಬರ್ 1 ರಂದು ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿ ಉದ್ದಕ್ಕೂ ಗಡಿ ರೇಖೆಯ ತಪಾಸಣೆಯನ್ನು ಕೈಗೊಳ್ಳುವಾಗ ಯೋಧರಿಬ್ಬರು ಪಾಕ್‍ಬದಿಗೆ ದಾಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಂಗೂಲಿ, ರಿಕ್ಕಿ ದಾಖಲೆ ಸರಿಗಟ್ಟಲು ಕೊಹ್ಲಿ ತವಕ ಸಶಸ್ತ್ರ ಪಡೆ ಧ್ವಜ ದಿನಾಚರಣೆ […]

ಚಿರತೆ ಸೆರೆಗೆ ವಿಶೇಷ ತಂಡ ರಚನೆ : ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು, ಡಿ.3- ರಾಜಧಾನಿ ಬೆಂಗಳೂರಿನ ಹೊರಭಾಗದಲ್ಲಿ ಸಾರ್ವಜನಿಕರಿಗೆ ತೀವ್ರ ಆತಂಕ ಸೃಷ್ಟಿಸಿರುವ ಚಿರತೆಯನ್ನು ಸೆರೆಹಿಡಿಯಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಹೊರವಲಯ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವ ಕಾರಣ, ಸಹಜವಾಗಿ ಜನತೆ ಆತಂಕ್ಕೀಡಾಗಿದ್ದಾರೆ. ತಕ್ಷಣವೇ ಇದನ್ನು ಸೆರೆಹಿಡಿಯಲು ವಿಶೇಷ ತಂಡ ರಚಿಸಲು ಸಂಬಂಧಪಟ್ಟವರಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು. ಈ ಮೊದಲು ಚಿರತೆ ಹಾವಳಿ ಕಾಡು ಇರುವ ಪ್ರದೇಶಗಳಲ್ಲಿ […]