20 ಅಡಿ ಆಳಕ್ಕೆ ಬಿದ್ದ ಕಾರು, ವ್ಯಕ್ತಿಯ ದವಡೆಗೆ ಸಿಲುಕಿದ ಕಟ್ಟಿಗೆ

ತುಮಕೂರು,ಫೆ.11- ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಕಾರು ಬಿದ್ದ ಘಟನೆ ಜಿಲ್ಲಾಯ ಕುಣಿಗಲ್ ತಾಲೂಕಿನ ಬಿದನಗೆರೆ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಕಟ್ಟಿಗೆಯ ತುಂಡು ವ್ಯಕ್ತಿ ದವಡೆಗೆ ಹೊಕ್ಕಿದ್ದು, ಸದ್ಯ ಗಾಯಾಳುವನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿ ಹರ್ಷ, ತಾಯಿ ಶಿವಮ್ಮ, ಪತ್ನಿ ಮಕ್ಕಳೊಂದಿಗೆ ತುಮಕೂರು ಜಿಲ್ಲಾಯ ದೇವಾಲಯಗಳಿಗೆ ಭೇಟಿ ನೀಡಿ ವಾಪಸ್ ಆಗುತ್ತಿದ್ದಾಗ ಅಪಘಾತ ಸಂಭವಿಸಿದೆ. ತೆಂಗಿನತೋಟದಲ್ಲಿ ಕಾರು ಬಿದ್ದ ರಭಸಕ್ಕೆ ಕಟ್ಟಿಗೆಯ ತುಂಡು ದವಡೆಗೆ ಸಿಲುಕಿದೆ. ಕುಣಿಗಲ್ ಪಟ್ಟಣದ ಸಾರ್ವಜನಿಕ […]