ಸಿನಿಮಾ ಶೈಲಿಯಲ್ಲಿ ಕಳ್ಳನನ್ನು ಬೆನ್ನಟ್ಟಿ ಹಿಡಿದ
ಬಸವನಗುಡಿ ಪೊಲೀಸರು

ಬೆಂಗಳೂರು, ಜು.12- ಹಾಡು ಹಗಲೆ ಭಾರಿ ಬೆಲೆಬಾಳುವ ಕಾರು ಕಳವು ಮಾಡಿಕೊಂಡು ಹೋಗುತ್ತದ್ದ ಕಳ್ಳನನ್ನು ಬೆನ್ನಟ್ಟಿ ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ನಿವಾಸಿ ಶೂಟರ್ ಸಲ್ಮಾನ್ (31) ಬಂಧಿತ ಆರೋಪಿ. ಯಡಿಯೂರು ಸರ್ಕಲ್‍ಬಳಿಯ ಮನೆಯೊಂದರ ಪಾರ್ಕಿಂಗ್ ಸ್ಥಳದಲ್ಲಿದ್ದ 3 ಕಾರುಗಳ ಪೈಕಿ ಸುಮಾರು 23 ಲಕ್ಷ ಬೆಲೆಯ ಒಂದು ಕಾರನ್ನು ಆರೋಪಿ ಚಲಾಯಿಸಿಕೊಂದು ಹೋಗಿದ್ದನು. ಮೊನ್ನೆ ಬೆಳಗ್ಗೆ ಆ ಮನೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ 3 ಐಷಾರಾಮಿ ಕಾರುಗಳು ಹಾಗೂ ಅಲ್ಲೆ ಹೋಲ್ಡರ್‍ನಲ್ಲಿ ಇಟ್ಟಿದ್ದ ಕಾರಿನ […]