ಕಾಂಗ್ರೆಸ್ ಉಚಿತ ಉಡುಗೊರೆ ಅಸ್ತ್ರಕ್ಕೆ ಬಿಜೆಪಿ ಮೀಸಲಾತಿ ಬ್ರಹ್ಮಾಸ್ತ್ರ

ಬೆಂಗಳೂರು,ಮಾ.25- ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ ಚುನಾವಣೆ ಪ್ರಣಾಳಿಕೆಯ ಗ್ಯಾರಂಟಿ ಉಚಿತ ಯೋಜನೆಗಳ ಅಸ್ತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ಗಿಫ್ಟ್ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಿ ಮತದಾರರನ್ನು ಕಮಲದತ್ತ ಸೆಳೆಯುವ ಕಸರತ್ತು ನಡೆಸಿದೆ. ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆ ಘೋಷಣೆ ಆಗುವ ಮುನ್ನವೇ ಚುನಾವಣೆ ಪೂರ್ವ ಪ್ರಚಾರಗಳು ಮತ್ತು ಸಮಾವೇಶಗಳಲ್ಲಿ ಹಲವಾರು ಉಚಿತ ಕೊಡುಗೆಗಳ ಚುನಾವಣೆ ಆಶ್ವಾಸನೆಗಳನ್ನು ಘೋಷಣೆ ಮಾಡಿದೆ.ಕಾಂಗ್ರೆಸ್ ಪಕ್ಷದ ನೇತಾರರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮೂಲಕ ಚುನಾವಣೆ ಪ್ರಣಾಳಿಕೆಯ ಘೋಷಣೆಗಳನ್ನು […]

ನಕಲಿ ಅಂಕಪಟ್ಟಿ ಜಾಲ, ಇಬ್ಬರ ಬಂಧನ

ಬೆಂಗಳೂರು,ಆ.24- ಪದವಿ ಪ್ರಮಾಣ ಪತ್ರ ಮತ್ತು ಪದವಿ ಅಂಕಪಟ್ಟಿಗಳನ್ನು ನಕಲಿಯಾಗಿ ಸೃಷ್ಟಿಸಿ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಇಬ್ಬರು ವಂಚಕರನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಅಯೂಬ್ ಪಾಷ ಅಲಿಯಾಸ್ ಅಯೂಬ್ (52) ಚಿಕ್ಕಬಳ್ಳಾಪುರದ ಖಲೀಲ್ ವುಲ್ಲಾ ಬೇಗ್ ಅಲಿಯಾಸ್ ಖಲೀಬ್ (52) ಬಂಧಿತ ಆರೋಪಿಗಳು. ಬಂಧಿತರಿಂದ ಗಜರಾಜ್ ಎಂಬಾತನ ಹೆಸರಿನಲ್ಲಿರುವ ಬಿಕಾಂ ವ್ಯಾಸಂಗದ ಎರಡು ನಕಲಿ ಪದವಿ ಪ್ರಮಾಣ ಪತ್ರಗಳು ಹಾಗೂ 1ರಿಂದ 6ನೇ ಸೆಮಿಸ್ಟಾರ್‍ನ ಒಟ್ಟು 6 ನಕಲಿ ಅಂಕಪಟ್ಟಿಗಳು, ಪಿಯೂಷ್ […]