ಗೂಢಚಾರಿಕೆ ಬಲೂನ್ ಹೊಡೆದುರುಳಿಸಿದ ಅಮೆರಿಕ ವಿರುದ್ಧ ಚೀನಾ ಕೆಂಡ

ಬೀಜಿಂಗ್,ಫೆ.5- ಗೂಢಚಾರಿಕೆ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿರುವುದು ಚೀನಾವನ್ನು ಕೆರಳಿಸಿದೆ. ನಿಮ್ಮ ನಿರ್ಧಾರಕ್ಕೆ ನಾವು ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದೂ ಎಚ್ಚರಿಸಿದೆ. ಚೀನಾದ ಗೂಢಚಾರಿಕೆ ಬಲೂನ್ ಅನ್ನು ಅಟ್ಲಾಂಟಿಕ ಕರಾವಳಿಯಲ್ಲಿ ಹೊಡೆದುರುಳಿಸಿರುವ ಪೆಂಟಗಾನ್ ಕ್ರಮವನ್ನು ಬಿಡೆನ್ ಆಡಳಿತ ಶ್ಲಾಘಿಸಿರುವ ಬೆನ್ನಲ್ಲೆ ಚೀನಾ ಅತೃಪ್ತಿ ಹೊರಹಾಕಿರುವುದು ಗಮನಿಸಿದರೆ ಎರಡು ಬಲಾಢ್ಯ ರಾಷ್ಟ್ರಗಳ ನಡುವಿನ ವೈಷಮ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಚೀನಾದ ನಡೆ ನಮ್ಮ ದೇಶಕ್ಕೆ ವಿರುದ್ಧವಾದ ನಡೆಯಾಗಿರುವುದರಿಂದ ಬಲೂನ್ ಹೊಡೆದುರುಳಿಸಿರುವ ನಮ್ಮ ಕಾರ್ಯ ಕಾನೂನುಬದ್ಧವಾಗಿದೆ ಎಂದು ಅಮೆರಿಕ […]