ಖ್ಯಾತ ವ್ಯಂಗ್ಯ ಚಿತ್ರಕಾರ ನಾರಾಯಣ ವಿಧಿವಶ

ಕೋಲ್ಕತ್ತಾ, ಜ. 18- ಬಂತೂಲ್ ದಿ ಗ್ರೇಟ್, ಹಂಡಾ ಬೋಂಡಾ, ನೋಂಟೆ ಪೋ0ಟೆ ಎಂಬ ಹಾಸ್ಯ ಕಾರ್ಟೂನ್‍ಗಳನ್ನು ಬಿಡಿಸುವ ಮೂಲಕ ಖ್ಯಾತರಾಗಿದ್ದ ವ್ಯಂಗ್ಯ ಚಿತ್ರಕಾರ ನಾರಾಯಣ ದೇಬಾಂತ್ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾರಾಯ ದೇಬಾಂತ್ ಅವರನ್ನು ಡಿಸೆಂಬರ್ 24 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಆದರೆ ಇಂದು ಬೆಳಗ್ಗೆ 10.15ಕ್ಕೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ. 1925, ನವೆಂಬರ್ 25ರಂದು ಔರಾದಲ್ಲಿ […]