ಕಾವೇರಿ ನದಿ ನೀರು ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ : ಕಾಂಗ್ರೆಸ್ ಆರೋಪ

ಬೆಂಗಳೂರು,ನ.24- ಕಾವೇರಿಗೆ ಅಡ್ಡಲಾಗಿ ತಮಿಳುನಾಡು ಸರ್ಕಾರ ನಿರ್ಮಿಸುತ್ತಿರುವ ಅಣೆಕಟ್ಟು ಯೋಜನೆಗೆ ಕರ್ನಾಟಕ ಸರ್ಕಾರ ಆಕ್ಷೇಪಣೆ ಸಲ್ಲಿಸದೆ ಇರುವುದರಿಂದ ಮುಂದಿನ ದಿನಗಳಲ್ಲಿ ನೀರಾವರಿ ವಿಷಯದಲ್ಲಿ ಭಾರೀ ಅನ್ಯಾಯ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರರಾದ ಲಕ್ಷ್ಮಣ್ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಸಂಕಲ್ಪ ಯಾತ್ರೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಟೀಕಿಸುವುದರಲ್ಲೇ ಅವರ ಸಮಯ ವ್ಯರ್ಥವಾಗುತ್ತಿದೆ. ರಾಜ್ಯ ಶ್ರೇಯೋಭಿವೃದ್ಧಿಗಿಂತ ಅವರಿಗೆ ಪಕ್ಷದ ರಾಜಕಾರಣವೇ ಮುಖ್ಯವಾಗಿದೆ ಎಂದು ಆರೋಪಿಸಿದರು. ಹೊಗೆನಕಲ್ಲಿನಲ್ಲಿ ತಮಿಳುನಾಡು […]

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ

ಮಂಡ್ಯ, ಅ.22- ಕಾವೇರಿ ಜಲಾನಯನ ಪ್ರದೇಶದಲ್ಲಿ 4 ತಿಂಗಳಿನಿಂದ ಆರಂಭವಾದ ವರುಣನ ಆರ್ಭಟ ಆಗಾಗ ವಿರಾಮ ಪಡೆದು ಮತ್ತೆ ಮುಂದುವರಿದಿರುವುದು ಜನರ ಆತಂಕವನ್ನು ಇಮ್ಮಡಿಗೊಳಿಸಿದೆ. ಬಹುತೇಕ ದಿನಗಳಲ್ಲಿ ಕನಿಷ್ಠ 25 ಸಾವಿರ ಕ್ಯುಸೆಕ್ ನೀರಿನಿಂದ ಮೈದುಂಬಿ ಹರಿಯತ್ತಿರುವ ಕಾವೇರಮ್ಮನ ಜತೆಗೆ ಮಳೆರಾಯ ಕೂಡ ಆರ್ಭಟಿಸುತ್ತಿದ್ದಾನೆ. ಚಳಿಗಾಲವೂ ಮಳೆಗಾಲವಾಗಿ ಪರಿವರ್ತನೆ ಆಗಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡಲಾರಂಭಿಸಿದೆ. ಏಕೆಂದರೆ ಈಗಾಗಲೇ ಪ್ರಕೃತಿ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಯಿಂದಾಗಿ ಬೇಸಿಗೆ ಮತ್ತು ಮಳೆಗಾಲ ಇರಲಿದೆ ಎಂದು ಪರಿಸರ ವಿಜ್ಞಾನಿಗಳು ನೀಡಿದ್ದ […]

ಪ್ರವಾಸಿಗರ ಕಣ್ಮನ ತಣಿಸುತ್ತಿರುವ ಶಿವನಸಮುದ್ರ

ಮಳವಳ್ಳಿ,ಜು.13- ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಜೋರಾಗಿರುವುದರಿಂದ ತಾಲೂಕಿನ ವ್ಯಾಪ್ತಿಯಲ್ಲಿ ಕಪಿಲಾ-ಕಾವೇರಿ ಸಂಗಮದಲ್ಲಿ ನದಿಗಳು ಮೈದುಂಬಿ ಹರಿಯುತ್ತಾ ಶಿವನ ಸಮುದ್ರದ ಪ್ರವಾಸಿತಾಣ ಗಗನಚುಕ್ಕಿ ಜಲಪಾತ ದುಮ್ಮಿಕ್ಕುತ್ತಾ ಪ್ರವಾಸಿಗರ ಕಣ್ಮನ ತಣಿಸಲು ಕೈ ಬೀಸಿ ಕರೆಯುತ್ತಿದೆ. ಕೆಲವು ದಿನಗಳಿಂದ ಕೇರಳ ಮತ್ತು ಕೊಡಗಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಕಾವೇರಿ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿದ್ದು, ಎರಡೂ ಜಲಾಶಯಗಳಿಂದಲೂ ಒಂದು ಲಕ್ಷ ಕ್ಯೂಸೆಕ್ ವರೆಗೂ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ. ಈ ಪ್ರಕೃತಿಯ ನಯನ ರಮಣೀಯ ಸೊಬಗನ್ನು ಕಣ್ಣುಂಬಿಕೊಳ್ಳಲು […]