ಗೈಲ್ ನಿರ್ದೇಶಕರಿಗೆ ಸಿಬಿಐನಿಂದ ಗ್ರಿಲ್

ನವದೆಹಲಿ, ಜ.16- ಭಾರತೀಯ ಅನಿಲ ಪ್ರಾಕಾರ ಲಿಮಿಟೆಡ್ (ಜಿಎಐಎಲ್)ನಿಂದ ಮಾರಾಟ ಮಾಡುವ ಪೆಟ್ರೋಲಿಯಂ ಉತ್ಪನ್ನಗಳಿಗೆ ರಿಯಾಯಿತಿ ನೀಡಲು ಲಂಚ ಕೇಳಿದ ಮಾರುಕಟ್ಟೆ ವಿಭಾಗದ ನಿರ್ದೇಶಕ ರಂಗನಾಥ್ ಅವರನ್ನು ಭಾನುವಾರವೂ ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ. ಮಧ್ಯವರ್ತಿಗಳ ಮೂಲಕ ರಂಗನಾಥ್ 50 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು, ರಂಗನಾಥ್ ಪರವಾಗಿ ಮಧ್ಯವರ್ತಿಗಳು ಲಂಚವನ್ನು ಪಡೆದಿದ್ದರು ಎಂದು ಆರೋಪಿಸಿ ದೆಹಲಿ ಮೂಲದ ಎರಡು ಖಾಸಗಿ ಕಂಪೆನಿಗಳು ಆರೋಪಿಸಿದ್ದವು. ದೂರು ದಾಖಲಿಸಿದ ಸಿಬಿಐ ನಿನ್ನೆ ಎಂಟು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. […]