ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳಿಗೆ ಹೊಸ ರೂಲ್ಸ್

ನವದೆಹಲಿ,ಮಾ.7- ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಹಾಗೂ ಪ್ರಭಾವಿ ವ್ಯಕ್ತಿಗಳಿಗಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೆಲೆಬ್ರಿಟಿಗಳು ಯಾವುದೆ ಉತ್ಪನ್ನ ಅಥವಾ ಸೇವೆಗಳನ್ನು ಅನುಮೋದಿಸುವಾಗ ಅವರು ಕಡ್ಡಾಯವಾಗಿ ಎಂಡೋರ್ಸ್‍ಮೆಂಟ್ಸ್ ನೋ-ಹೌ ಎಂಬ ಹೊಸ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ. ಗ್ರಾಹಕರೊಂದಿಗೆ ಪಾರದರ್ಶಕತೆ ಹಾಗೂ ದೃಢಿಕರಣ ಕಾಪಾಡಿಕೊಳ್ಳಬೇಕು, ಗ್ರಾಹಕ ಸಂರಕ್ಷಣಾ ಕಾಯಿದೆ ಮತ್ತು ಯಾವುದೇ ಸಂಬಂಧಿತ ನಿಯಮಗಳು ಅಥವಾ ಮಾರ್ಗಸೂಚಿಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬಯಸಿರುವುದರಿಂದ ಹೊಸ ಮಾರ್ಗಸೂಚಿ ರಚಿಸಲಾಗಿದೆ. […]