ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೊರೋನಾ ನಿಯಮ ಸಡಿಲ

ನವದೆಹಲಿ : ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯಗೊಳಿಸಲಾಗಿದ್ದ ಏಳು ದಿನಗಳ ಗೃಹ ಬಂಧನ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಓಮಿಕ್ರಾನ್ ರೂಪಾಂತರ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಮೊದಲು ಮಾರ್ಗಸೂಚಿಗಳನ್ನು ಪರಿಷ್ಕರಿಸಿ ವಿದೇಶಗಳಿಂದ ಬರುವ ಪ್ರಯಾಣಿಕರು 14 ದಿನ ಸ್ವಯಂ ನಿಗಾವಣೆಯಲ್ಲಿರಬೇಕು, ಭಾರತಕ್ಕೆ ಆಗಮಿಸಿದ ಬಳಿಕ ಏಳು ದಿನ ಕಡ್ಡಾಯವಾಗಿ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿರಬೇಕು ಎಂದು ನಿಯಮ ರೂಪಿಸಲಾಗಿತ್ತು. ಈಗ ಅದಕ್ಕೆ ವಿನಾಯ್ತಿ ನೀಡಲಾಗಿದ್ದು, ಸೋಮವಾರದಿಂದ ಜಾರಿಗೆ ಬರಲಿದೆ. ಹೊಸ ನಿಯಮಗಳ ಪ್ರಕಾರ ಎಲ್ಲ […]