‘ಪೂರ್ವ ತಯಾರಿ ಇಲ್ಲದೆ ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧ ಮಾಡಿದೆ’

ನವದೆಹಲಿ, ಜು.16- ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಸಿರುವ ಕೇಂದ್ರ ಸರ್ಕಾರ ಅಗತ್ಯವಾದ ಪೂರ್ವ ತಯಾರಿಗಳನ್ನು ಮಾಡಿಕೊಂಡಿಲ್ಲ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ಪ್ರಾಸ್ಟಿಕ್ ನಿಷೇಧವನ್ನು ಜಾರಿಗೆ ತರುವ ಮೊದಲು ಕೇಂದ್ರ ಸರ್ಕಾರ ರಾಜ್ಯ ಪರಿಸರ ಸಚಿವರ ಸಭೆ ನಡೆಸಿಲ್ಲ. ಪೂರ್ವಸಿದ್ಧತೆ ಕೊರತೆಯಿಂದ ಏಕಾಏಕಿ ಜಾರಿಗೆ ತರಲಾಗಿದೆ ಎಂದು ಆಕ್ಷೇಪಿಸಿದ್ದಾರೆ. ಪ್ಲಾಸ್ಟಿಕ್ ಬದಲಿಗೆ ಜನರಿಗೆ ಪರ್ಯಾಯಗಳನ್ನು ಒದಗಿಸಬೇಕಿದೆ ಮತ್ತು ಉತ್ಪಾದನಾ ಘಟಕಗಳನ್ನು ಹಸಿರು ವಲಯಗಳನ್ನಾಗಿ ಬದಲಾಯಿಸಬೇಕಿದೆ. ಅದನ್ನು ಬಿಟ್ಟು ಏಕಾಏಕಿ ನಿಷೇಧ ಮಾಡಿ […]