ಬಡವರ ಮನೆ ನಿರ್ಮಾಣದಲ್ಲಿ ಹಗರಣ : ಮಾಜಿ ಅಧಿಕಾರಿ ಅರೆಸ್ಟ್

ಕೊಚ್ಚಿ,ಫೆ.18- ಬಡವರಿಗೆ ಮನೆ ನಿರ್ಮಿಸಿಕೊಡುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ವಿದೇಶಿ ದೇಣಿಗೆ ಕಾಯ್ದೆ ನಿಯಮಾವಳಿಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪಕ್ಕಾಗಿ ಜಾರಿ ನಿರ್ದೇಶನಾಲಯ ಲೈಫ್ ಮಿಷನ್ ಪ್ರಾಜೆಕ್ಟ್‍ನ ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಯು.ವಿ.ಜೋಸೆ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಕೇರಳದ ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿಯಲ್ಲಿರುವ ಜೋಸೆ ಅವರ ಕಚೇರಿಯಲ್ಲಿ ಸುಮಾರು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಹಗರಣದಲ್ಲಿ ಭಾಗಿಯಾದ ಆರೋಪಕ್ಕಾಗಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ವಿದೇಶಿ ದೇಣಿಗೆ ನೆರವು ಪಡೆದು ಬಡವರಿಗೆ ಮನೆ ನಿರ್ಮಾಣ ಮಾಡಿಕೊಡುವ ಯೋಜನೆಯ […]

ಅಪ್ಪಿತಪ್ಪಿ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಹೆಚ್ಚಿನ ವಹಿವಾಟು ನಡೆಸೀರಿ ಜೋಕೆ.. !

ಬೆಂಗಳೂರು,ಫೆ.3- ಅಪ್ಪಿತಪ್ಪಿಯೂ ನಿಮ್ಮ ಖಾತೆಗಳಲ್ಲಿ ಹೆಚ್ಚಿನ ವಹಿವಾಟು ನಡೆಸೀರಿ ಜೋಕೆ! ಒಂದು ವೇಳೆ ಆಸೆ ಇಲ್ಲವೇ ಆಮಿಷಕ್ಕಾಗಿ ಏಕಾಏಕಿ ಖಾತೆಗಳಿಗೆ ಹೆಚ್ಚಿನ ಹಣ ಜಮೆಯಾದರೆ ನಿಮ್ಮ ಖಾತೆಯನ್ನೇ ಜಪ್ತಿಯಾಗುತ್ತದೆ. ಅದರಲ್ಲೂ ಚುನಾವಣೆ ನಡೆಯುತ್ತಿರುವ ಕರ್ನಾಟಕದಲ್ಲಿ ಪ್ರತಿಯೊಂದು ಖಾತೆದಾರರ ಮೇಲೂ ಆಯೋಗ ಹದ್ದಿನ ಕಣ್ಣಿಟ್ಟಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಅವರು ಕರ್ನಾಟಕದ ಆರ್‍ಬಿಐ ಮುಖ್ಯವ್ಯವಸ್ಥಾಪಕರು ಹಾಗೂ ರಾಜ್ಯದಲ್ಲಿ ಪ್ರಮುಖ ಬ್ಯಾಂಕ್‍ಗಳ ಪ್ರಧಾನ ವ್ಯವಸ್ಥಾಪಕರ ಜೊತೆ ಸಭೆ ನಡೆಸಿದ್ದಾರೆ. ಚುನಾವಣೆಯಲ್ಲಿ ನಡೆಯಬಹುದಾದ ಅಕ್ರಮವನ್ನು ತಡೆಗಟ್ಟಲು ಆಯೋಗ ಪ್ರತಿ […]

ಸಿಎಸ್‍ಕೆಗೆ ಧೋನಿಯೇ ಬಾಸ್

ಚೆನ್ನೈ, ಸೆ. 4- ಹಾಲಿ ಚಾಂಪಿಯನ್ ಆಗಿದ್ದರೂ ಕೂಡ ನಾಯಕತ್ವದ ನಿರ್ಧಾರದಿಂದಾಗಿ 2022ರ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್‍ಕೆ ಮುಂದಿನ ಐಪಿಎಲ್ ಋತುವಿನಲ್ಲಿ ಚಾಂಪಿಯನ್ ಆಗಲು ಈಗಾಗಲೇ ರಣತಂತ್ರ ಹೆಣೆಯಲು ಸಜ್ಜಾಗಿದೆ. ಇಂದು ನಡೆದ ಪತ್ರಿಕಾಗೋಷ್ಠಿ ಯಲ್ಲಿ ಸಿಎಸ್‍ಕೆ ತಂಡದ ಸಿಇಒ ಕಾಸಿ ವಿಶ್ವನಾಥ್ ಅವರು ತಂಡದ ನಾಯಕತ್ವ ಹಾಗೂ ಮುಂಬರುವ ಐಪಿಎಲ್ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‍ನ ತಂಡದ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು. 2022ರ ಐಪಿಎಲ್ ನಡೆಯಲು ಒಂದು ದಿನ ಬಾಕಿ ಇರುವಾಗಲೇ […]

ಶೀಘ್ರದಲ್ಲೇ ನೂತನ ಸಂಸತ್ ಭವನ ಲೋಕಾರ್ಪಣೆ

ನವದೆಹಲಿ, ಆ.28 (ಪಿಟಿಐ) ಹೊಸ ಸಂಸತ್ ಭವನದ ಮುಖ್ಯ ರಚನೆ ಪೂರ್ಣಗೊಂಡಿದ್ದು, ಈಗ ಆಂತರಿಕ ಕಾಮಗಾರಿಯನ್ನು ಪೂರ್ಣಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಟಾಟಾ ಪ್ರಾಜೆಕ್ಟ್ ಸಿಇಒ ವಿನಾಯಕ್ ಪೈತಿಳಿಸಿದ್ದಾರೆ. ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ಹೊಸ ಸಂಸತ್ ಕಟ್ಟಡವನ್ನು ನಿರ್ಮಿಸುತ್ತಿದ್ದು, ಇದು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರತಿಬಿಂಬಿಸುವ ಭವ್ಯವಾದ ಸಂವಿಧಾನ ಭವನವಾಗಲಿದೆ. ಸಂಸತ್ತಿನ ಸದಸ್ಯರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳಗಳನ್ನು ಈ ಭವನ ಹೊಂದಿದೆ. ಹೊಸ ಸಂಸತ್ತಿನ […]

ಡಾಯ್ಚ ಬ್ಯಾಂಕ್‍ನ ಮಾಜಿ ಸಿಇಓ ಅಂಶು ಜೈನ್ ನಿಧನ

ನ್ಯೂಯಾರ್ಕ್,ಆ-14 – ಭಾರತ ಸಂಜಾತ ಡಾಯ್ಚ ಬ್ಯಾಂಕ್‍ನ ಮಾಜಿ ಸಿಇಓ ಅಂಶು ಜೈನ್(59) ಅವರು ಕ್ಯಾನ್ಸರ್ ರೋಗದಿಂದ ನಿಧನರಾಗಿದ್ದಾರೆ. ಕಳೆದ 5 ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲಿ ಇತ್ತೀಚೆಗೆ ಅನಾರೋಗ್ಯಕೀಡಾಗಿದ್ದ ಅವರು ಮುಂಜಾನೆ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ . ಕಳೆದ 2017 ರಲ್ಲಿ ಜೈನ್ ಅವರಿಗೆ ಡ್ಯುವೋಡೆನಲ್ (ಸಣ್ಣ ಕರುಳು ,ಹೊಟ್ಟೆ) ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು ಅಂದಿನಿಂದ ಅವರು ಆತಂಕದಲ್ಲೇ ಜೀವಿಸಿದ್ದರು ರಾಜಸ್ತಾನದ ಜೈಪುರದಲ್ಲಿ ಜನಿಸಿದ ಜೈನ್ ಅವರು ದೆಹಲಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ […]