ನಿಷ್ಕ್ರಿಯಗೊಂಡ ಉಪಗ್ರಹದ ಮರು ಪ್ರಯೋಗಕ್ಕೆ ಇಸ್ರೋ ಸಿದ್ಧತೆ

ಬೆಂಗಳೂರು, ಮಾ 6 – ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ನಿಷ್ಕ್ರಿಯಗೊಂಡಿರುವ ಭೂಮಿಯ ವಾತಾವರಣ ಅಧ್ಯಯನ ಉಪಗ್ರಹವಾದ ಮೇಘಾ-ಟ್ರೋಪಿಕ್ಸ್-1 (ಎಂಟಿ 1) ಮತ್ತೆ ಮರು ಕಾರ್ಯ ಪ್ರಯೋಗಕ್ಕೆ ಸಿದ್ಧತೆ ನಡೆಸುತ್ತಿದೆ. ಉಷ್ಣವಲಯದ ಹವಾಮಾನ ಅಧ್ಯಯನಕ್ಕಾಗಿ ಇಸ್ರೋ ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸಿಎನ್‍ಇಎಸ್ ಜಂಟಿಯಾಗಿ ಎಂಟಿ 1 ಉಪಗ್ರಹವನ್ನು ಕಳೆದ 2011 ಅ. 12 ರಂದು ಉಡಾವಣೆ ಮಾಡಲಾಗಿತ್ತು. ಉಪಗ್ರಹದ ಕಾರ್ಯಾಚರಣೆಯ ಅವಧಿಯು ಮೂಲತಃ ಮೂರು ವರ್ಷಗಳಾಗಿದ್ದರೂ, ಉಪಗ್ರಹವು 2021 ರವರೆಗೆ ಪ್ರಾದೇಶಿಕ ಮತ್ತು […]

ಅಗ್ನಿಪತ್ ಯೋಜನೆಗೆ ನ್ಯಾಯಾಲಯದ ಬೆಂಬಲ : ಆಕ್ಷೇಪಣಾ ಅರ್ಜಿಗಳು ವಜಾ

ನವದೆಹಲಿ,ಫೆ.27- ಸೇನೆಯ ನೇಮಕಾತಿಯಲ್ಲಿ ಕಳೆದ ವರ್ಷ ಜಾರಿಗೊಳಿಸಲಾಗಿದ್ದ ಹೊಸ ಯೋಜನೆ ಅಗ್ನಿಪತ್ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಗುಚ್ಚವನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ. ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ ಮತ್ತು ಸಶಸ್ತ್ರ ಪಡೆಗಳನ್ನು ಸುಸಜ್ಜಿತಗೊಳಿಸಲು ಅಗ್ನಿಪತ್ ಪೂರಕವಾಗಿದೆ ಎಂದು ದೆಹಲಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠ ಅಭಿಪ್ರಾಯಪಟ್ಟಿದ್ದು, ಯೋಜನೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿ ತರಕಾರು ಅರ್ಜಿಗಳನ್ನು ವಜಾಗೊಳಿಸಿದೆ. ಕನ್ನಡಿಗನ ಸಂಶೋಧನೆ: ಮಕ್ಕಳಿಗೆ […]

ತ್ರಿಪುರಾದಲ್ಲಿ ಬಿಜೆಪಿಗೆ ತಲೆನೋವಾದ ಟಿಎಂಪಿ

ಗುವಾಹಟಿ,ಫೆ.11-ತ್ರಿಪುರಾದಲ್ಲಿ ಬಿಜೆಪಿಗೆ ಟಿಎಂಪಿ ಪಕ್ಷ ತಲೆನೋವಾಗಿ ಪರಿಣಮಿಸಿದೆ. ಸ್ಥಳೀಯ ಸಮುದಾಯಗಳಿಗೆ ಪ್ರತ್ಯೇಕ ತಿಪ್ರಾಲ್ಯಾಂಡ್ ರಾಜ್ಯ ರಚಿಸಬೇಕು ಎಂದು ಪಟ್ಟು ಹಿಡಿದಿರುವ ತಿಪ್ರಾ ಮೋಥಾ ಪಕ್ಷದ ಮುಖ್ಯಸ್ಥ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮಾ ಅವರು ಮುಂಬರುವ ಚುನಾವಣೆಯಲ್ಲಿ ಕಿಂಗ್‍ಮೇಕರ್ ಆಗಿ ಹೊರಹೊಮ್ಮುವ ಸಾಧ್ಯತೆಗಳಿವೆ ಎನ್ನಲಾಗಿದೆ. ತ್ರಿಪುರಾ ಜನಸಂಖ್ಯೆಯ ಸುಮಾರು 32 ಪ್ರತಿಶತದಷ್ಟು ಇರುವ ಬುಡಕಟ್ಟು ಜನಾಂಗದವರನ್ನು ಪ್ರಚೋದಿಸುವ ಮೂಲಕ ದೇಬ್ ಬರ್ಮಾ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಬಾಂಗ್ಲಾ ವಿಭಜನೆ ಸಂದರ್ಭದಲ್ಲಿ ಪೂರ್ವ ಬಂಗಾಳದ ಸಾವಿರಾರು ನಿರಾಶ್ರೀತರು ತ್ರಿಪುರದಲ್ಲಿ […]

ಬಿಬಿಸಿ ಸಾಕ್ಷ್ಯ ಚಿತ್ರ ನಿಷೇಧ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ನವದೆಹಲಿ,ಜ.30-ಪ್ರಧಾನಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತು ಬ್ರಿಟಿಷ್ ಸುದ್ದಿಸಂಸ್ಥೆ ಬಿಬಿಸಿ ನಿರ್ಮಿಸಿದ್ದ ಸಾಕ್ಷ್ಯಚಿತ್ರ ನಿಧಿಷೇಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರಿಂಕೋರ್ಟ್ ಸಮ್ಮತಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ, e. ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು ವಕೀಲ ಎಂ.ಎಲ್.ಶರ್ಮಾ ಮತ್ತು ಹಿರಿಯ ವಕೀಲ ಸಿಯು ಸಿಂಗ್ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿಗಳನ್ನು ವಿಚಾರಣೆ ನಡೆಸಲು ಸಮ್ಮತಿಸಿದೆ. ಭಾರತ: ಮೋದಿ ಪ್ರಶ್ನೆ ಎಂಬ ಸಾಕ್ಷ್ಯ ಚಿತ್ರ […]