ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವಕ್ಕೆ ಸಮ್ಮತಿ

ಬೆಂಗಳೂರು,ಜ.25- ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನಾಳೆ ನಡೆಯಲ್ಲಿರೋ 74 ನೇ ಗಣರಾಜ್ಯೋತ್ಸವ ಅಚರಣೆ ಸಂದರ್ಭದಲ್ಲಿ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಟ ಮಾಡಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ತಿಳಿಸಿದ್ದಾರೆ. ಗಣರಾಜ್ಯೋತ್ಸವ ಆಚರಣೆಗಾಗಿ ಮೈದಾನವನ್ನು ಸ್ವಚ್ಚಗೊಳಿಸಲಾಗುತ್ತಿದ್ದು, ನಾಳೆ ಬೆಳಿಗಿನ ಧ್ವಜಾರೋಹಣಕ್ಕೆಕಂದಾಯ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಅವರು ವಿವರಣೆ ನೀಡಿದ್ದಾರೆ. ಈದ್ಗಾ ಮೈದಾನದಲ್ಲಿ ನಾಳೆ ಕೇವಲ ರಾಷ್ಟ್ರ ಧ್ವಜಾರೋಹಣ ಮಾತ್ರ ನೆರವೇರಿಸಲಾಗುವುದು ಉಳಿದಂತೆ ಯಾವುದೇ ಸಾಂಸ್ಕøತಿಕ […]

ಚಾಮರಾಜಪೇಟೆಯಲ್ಲಿ ರಾಷ್ಟ್ರಧ್ವಜವನ್ನು ಬೀದಿಗೆ ಎಸೆದ ಕಿಡಿಗೇಡಿಗಳು..!

ಬೆಂಗಳೂರು,ಅ.10- ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿರುವ ಹಿನ್ನಲೆಯಲ್ಲಿ ಈ ಬಾರಿ ಅದ್ದೂರಿ ಅಮೃತ ಮಹೋತ್ಸವ ಆಚರಿಸಲು ಇಡೀ ದೇಶ ಸಜಾಗಿದೆ. ಹರ್ ಘರ್ ತಿರಂಗಾ ಯೋಜನೆಯಡಿ ಪ್ರತಿ ಮನೆ ಮನೆಗಳ ಮೇಲೂ ತ್ರಿವರ್ಣ ಧ್ವಜ ಹಾರಿಸಲು ತೀರ್ಮಾನಿಸಲಾಗಿದೆ. ಇಂತಹ ಸಂದರ್ಭದಲ್ಲೇ ಕೆಲವು ಕಿಡಿಗೇಡಿಗಳು ರಾಷ್ಟ್ರ ಧ್ವಜವನ್ನು ಬೀದಿಗೆ ಎಸೆಯುವ ಮೂಲಕ ಅಪಮಾನವೆಸಗಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಕಿಡೆಗೇಡಿಗಳು ಚಾಮರಾಜಪೇಟೆಯಲ್ಲಿ ರಾಷ್ಟ್ರ ಧ್ವಜವನ್ನು ಬೀದಿಗೆ ಎಸೆಯುವ ಮೂಲಕ ರಾಷ್ಟ್ರ […]