ಪಿಎಚ್‍ಡಿ ಮಾಡುತ್ತಿರುವ ರಾಜ್ಯದ ಮೊದಲ ತೃತೀಯ ಲಿಂಗಿ ದೀಪು

ಚಾಮರಾಜನಗರ,ಜ.31- ತೃತೀಯ ಲಿಂಗಿಯೊಬ್ಬರು ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗುವ ಮೂಲಕ ಈ ಸಮುದಾಯದಲ್ಲಿ ಹೊಸ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ವಾಸವಿರುವ ದೀಪು ಬುದ್ದೆ ತಾನು ತೃತೀಯ ಲಿಂಗಿ ಎಂದೇ ಘೋಷಿಸಿಕೊಂಡು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯಾಗಿಯೇ ಇವರು ಪಿಎಚ್‍ಡಿ ಮಾಡುತ್ತಿದ್ದಾರೆ. ಇವರು ರಾಜ್ಯದಲ್ಲೇ ಲಿಂಗತ್ವ ಅಲ್ಪಸಂಖ್ಯಾತರಾಗಿ ಪಿಎಚ್‍ಡಿ ಮಾಡುತ್ತಿರುವ ಮೊದಲಿಗರಾಗಿ ದ್ದಾರೆ. ದೀಪು ಬುದ್ದೆ ಎಂಬ ಮಹಿಳೆ ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗುವ ಮೂಲಕ ಸಮುದಾಯದ […]