ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ..?

ಬೆಂಗಳೂರು,ಆ.27- ವಿವಾದಿತ ಚಾಮರಾಜ ಪೇಟೆಯ ಮೈದಾನದಲ್ಲಿ ಈ ಬಾರಿ ಸಾರ್ವಜನಿಕರ ಕೋರಿಕೆಯಂತೆ ಷರತ್ತುಬದ್ದ ಗಣೇಶ ಉತ್ಸವಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮೈದಾನದಲ್ಲಿ ಕೇವಲ 3 ದಿನ ಮಾತ್ರ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಲಾಗಿದ್ದು, ಯಾವುದೇ ಸಂಘಟನೆಗಳು ಇಲ್ಲವೆ ನಾಗರಿಕ ಸಮಿತಿಗಳು ಅನುಮತಿ ಪಡೆಯದೆ ಉತ್ಸವ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ […]