ಚಂದ್ರಾಲೇಔಟ್ ಶಾಲೆ ಮುಂದೆ ಹಿಜಾಬ್ ಗಲಾಟೆ…!

ಬೆಂಗಳೂರು,ಫೆ.12-ರಾಜ್ಯದ ಹಲವು ಭಾಗಗಳಲ್ಲಿ ವಿವಾದ ಸೃಷ್ಟಿಸಿರುವ ಹಿಜಾಬ್ ಇದೀಗ ನಗರದ ಶಾಲೆಯೊಂದಕ್ಕೂ ಲಗ್ಗೆಯಿಟ್ಟಿದ್ದು, ಇಂದು ಬೆಳಗ್ಗೆ ಶಾಲೆ ಮುಂಭಾಗ ಪೋಷಕರು ಜಮಾವಣೆಗೊಂಡು ಶಿಕ್ಷಕರು ಮತ್ತು ಶಾಲಾಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಂದ್ರಾಲೇಔಟ್‍ನಲ್ಲಿರುವ ವಿದ್ಯಾಸಾಗರ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯರಿಗೆ ನಿನ್ನೆ ಹಿಜಾಬ್ ಧರಿಸಿ ಬರಬೇಡಿ ಎಂದು ಶಿಕ್ಷಕರು ಹೇಳಿದ್ದಾರೆ. ಶಿಕ್ಷಕಿಯೊಬ್ಬರು ತರಗತಿಯ ಬೋರ್ಡ್ ಮೇಲೆ ಕೆಎಲ್‍ಎಸ್ ಎಂದು ಬರೆದಿರುವುದನ್ನು ವಿದ್ಯಾರ್ಥಿನಿಯರು ಪೋಷಕರಿಗೆ ತಿಳಿಸಿದ್ದಾರೆ. ಈ ವಿಷಯ ಕಾಡ್ಗಿಚ್ಚಿನಂತೆ ಹರಡಿದ್ದು, ಕೆಲ ಪೋಷಕರು ತರಗತಿಗಳಿಗೂ ನುಗ್ಗಿ ಶಿಕ್ಷಕರೊಂದಿಗೆ […]