ಚಂದ್ರಶೇಖರ್ ಸಾವು : ಕೊಲೆ ದೂರು ದಾಖಲಿಸಿಕೊಂಡು ತನಿಖೆ

ಬೆಂಗಳೂರು,ನ.4- ಹೊನ್ನಾಳಿ ಶಾಸಕ ರೇಣುಕಾ ಚಾರ್ಯ ಅವರ ಸಹೋದರ ಎಂ.ಪಿ.ರಮೇಶ್ ಅವರು ತಮ್ಮ ಮಗ ಚಂದ್ರಶೇಖರ್ನನ್ನು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ದಾವಣಗೆರೆ ಜಿಲ್ಲಾ ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ. ಚಂದ್ರಶೇಖರ್ ಅವರ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಎಫ್ಎಸ್ಎಲ್ ವರದಿ ಬಂದ ನಂತರ ಚಂದ್ರಶೇಖರ್ ಸಾವು ಹೇಗಾಗಿದೆ ಎಂಬುದು ನಿಖರವಾಗಿ ಗೊತ್ತಾಗಲಿದೆ ಎಂದು ಅವರು ಈ ಸಂಜೆಗೆ ತಿಳಿಸಿದ್ದಾರೆ. ಪಕ್ಷದ ವಿರುದ್ಧ ಮಾತಾಡೋರು ಪಕ್ಷಬಿಟ್ಟು ಹೋಗ್ತಾ ಇರಿ […]