ಪ್ರೀತಿಸಿದವಳಿಗಾಗಿ ಲಿಂಗ ಬದಲಾವಣೆ ಮಾಡಿಸಿಕೊಂಡ ದೈಹಿಕ ಶಿಕ್ಷಕಿ

ಭರತ್‍ಪುರ್, ನ.8- ರಾಜಸ್ಥಾನದಲ್ಲೊಂದು ಭಿನ್ನ ಪ್ರೇಮಕತೆ ವರದಿಯಾಗಿದೆ. ಮಹಿಳಾ ಶಿಕ್ಷಕಿಯೊಬ್ಬರು ಲಿಂಗ ಬದಲಾವಣೆ ಮಾಡಿಕೊಂಡು, ತನ್ನ ವಿದ್ಯಾಥಿಯನ್ನೇ ಮದುವೆಯಾಗಿದ್ದಾರೆ. ಪ್ರೀತಿಗಾಗಿ ಏನೆಲ್ಲಾ ನಡೆಯಬಹುದು ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ. ಸಾಮಾನ್ಯವಾಗಿ ಪುರುಷ ಲಿಂಗಿಗಳು ಸ್ತ್ರೀ ಲಿಂಗಗಳಾಗಿ ಬದಲಾಗಿರುವುದು ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಈ ಪ್ರಕರಣದಲ್ಲಿ ಯುವತಿಯೊಬ್ಬಳು ಯುವಕನಾಗಿ ಯಶಸ್ವಿಯಾಗಿ ಬದಲಾಗಿದ್ದು, ಇತ್ತೀಚೆಗೆ ಪ್ರೀತಿಸಿದವಳನ್ನು ಮದುವೆಯಾಗಿದ್ದಾರೆ. ಪ್ರೇಮಸೌಧ ತಾಜ್‍ಮಹಲ್ ಇರುವ ಆಗ್ರಾದಿಂದ ಕೆಲವು ಕಿಲೋ ಮೀಟರ್ ದೂರ ಇರುವ ಭರತ್‍ಪುರ್ ಜಿಲ್ಲೆಯ ದೀಗ್ಗ್ ತೆಹಸಿಲ್‍ನಲ್ಲಿ ಈ […]