ಕಲ್ಪತರು ನಾಡಿಗೂ ಕಾಲಿಟ್ಟ ಧರ್ಮದಂಗಲ್

ತುಮಕೂರು,ಫೆ.2- ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಪರ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಕರಾವಳಿಯಲ್ಲಿದ್ದ ಧರ್ಮದಂಗಲ್ ಕಲ್ಪತರು ನಾಡಿಗೆ ಕಾಲಿಟ್ಟಿದೆ. ಗುಬ್ಬಿಯಪ್ಪನ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮುಜರಾಯಿ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನದಲ್ಲಿ ಕಾನೂನಿನಂತೆ ನೂರು ಮೀಟರ್ ವ್ಯಾಪ್ತಿಯೊಳಗೆ ಅನ್ಯ ಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮನವಿ ಮಾಡಿವೆ. ಫೆ.4ರಂದು ಘೋಷಿತ ಜೆಡಿಎಸ್ ಅಭ್ಯಥಿಗಳ […]