ಪರ ವಿರೋಧ ಚರ್ಚೆಗೆ ಗ್ರಾಸವಾದ ಮೋಹನ್ ಭಾಗವತ್‍ರ ಹೇಳಿಕೆ

ನವದೆಹಲಿ,ಫೆ.6- ದೇಶದಲ್ಲಿನ ನಿರುದ್ಯೋಗಕ್ಕೆ ವೃತ್ತಿ ಘನತೆ ಕೊರತೆಯೆ ಪ್ರಮುಖ ಕಾರಣ ಎಂದು ಆರ್‍ಎಸ್‍ಎಸ್‍ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಪ್ರಧಾನಿ ಅವರ ಭರವಸೆ ಏನಾಯಿತು ಎಂಬ ಪ್ರಶ್ನೆಯೂ ಕೇಳಿ ಬಂದಿದೆ. ನಿನ್ನೆ ಮುಂಬೈನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮೋಹನ್ ಭಾಗವತ್, ಜನ ಸರ್ಕಾರಿ ಉದ್ಯೋಗದ ಹಿಂದೆ ಓಡುವುದನ್ನು ನಿಲ್ಲಿಸಬೇಕು. ಯಾವುದೇ ಕೆಲಸದಲ್ಲಿ ದೊಡ್ಡದು, ಚಿಕ್ಕದು ಎಂಬುದಿಲ್ಲ. ಎಲ್ಲರೂ ದುಡಿಯುವುದು ಸಮಾಜಕ್ಕಾಗಿ. ಅದು ಕಠಿಣ […]