ಶಿವರಾತ್ರಿ ಶಾಕ್ : ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರಿ ಏರಿಕೆ..!

ನವದೆಹಲಿ,ಮಾ.1- ದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ಗಳ (19 ಕೆಜಿಯ ಸಿಲಿಂಡರ್) ಬೆಲೆಯನ್ನು 105 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇಂದಿನಿಂದ ದೆಹಲಿಯಲ್ಲಿ 19 ಕೆ.ಜಿಯ ಸಿಲಿಂಡರ್‍ನ ಬೆಲೆ 2,012 ರೂ. ಆಗಿರುತ್ತದೆ. 5 ಕೆಜಿ ಸಿಲಿಂಡರ್ ಬೆಲೆಯೂ 27 ರೂ. ಏರಿಕೆಯಾಗಿದೆ. ಈಗ 5 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 569 ರೂ. ಆಗಿದೆ. ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್‍ನಲ್ಲಿ ಯಾವುದೇ ಹೆಚ್ಚಳವಿಲ್ಲ. ಎಲ್‍ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಂಗಳು ಪರಿಷ್ಕರಿಸಲಾಗುತ್ತದೆ. […]