ಗುಜರಾತ್ ಜೈಲುಗಳ ಮೇಲೆ ಪೊಲೀಸರ ಮಿಂಚಿನ ದಾಳಿ

ಅಹಮದಾಬಾದ್, ಮಾ.25 – ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಪಡೆದು ಗುಜರಾತ್ ಪೊಲೀಸರು ರಾಜ್ಯಾದ್ಯಂತ 17 ಜೈಲುಗಳ ಮೇಲೆ ಮಿಂಚಿನ ದಾಳಿ ನಡೆಸುತ್ತಿದ್ದಾರೆ. ಕಳೆದ ರಾತ್ರಿ ಆರಂಭವಾದ ಕಾರ್ಯಾಚರಣೆಯಲ್ಲಿ ಇಂದು ಮಧ್ಯಾಹ್ನದವರೆಗೂ ಮುಂದುವರೆದಿದ್ದು 50ಕ್ಕೂ ಹೆಚ್ಚು ಅಧಿಕಾರಿಗಳು ಸೇರಿದಂತೆ 1,700 ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ವಿಕಾಸ್ ಸಹಾಯ್ ತಿಳಿಸಿದ್ದಾರೆ. ಅಹಮದಾಬಾದï, ಸೂರತ್, ವಡೋದರಾ, ರಾಜ್ಕೋಟ್ ಮತ್ತು ಇತರ ನಗರಗಳ ಕೇಂದ್ರ ಕಾರಾಗೃಹಗಳಲ್ಲಿ ಮತ್ತು ಉಪ ಜೈಲುಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು […]

ಹೊಸ ವರ್ಷಾಚರಣೆಗೆ ಭದ್ರತೆ ಪರಿಶೀಲಿಸಿದ ಪ್ರತಾಪ್ ರೆಡ್ಡಿ

ಬೆಂಗಳೂರು, ಡಿ.28- ಹೊಸ ವರ್ಷ ಸಂಭ್ರಮಾಚರಣೆಗೆ ಅತಿ ಹೆಚ್ಚು ಜನರು ನಗರದಲ್ಲಿ ಸೇರುವ ನಿರೀಕ್ಷೆ ಇದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. ನಗರದ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಚರ್ಚ್ ಸ್ಟ್ರೇಟ್‍ಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಡ್ರೋಣ್ ನಿಗಾ:ಹೊಸ ವರ್ಷದ ಸಂಭ್ರಮಾಚರಣೆ ಆಗುತ್ತಿದೆ. ಈ ಪ್ರಮುಖ ರಸ್ತೆಗಳಲ್ಲಿ ಅತಿ ಹೆಚ್ಚು ಜನರು ಸೇರಲಿದ್ದಾರೆ.ಯಾವ ಪ್ರಮುಖ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂಬ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಸಿಸಿ […]

ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್

ಬೆಂಗಳೂರು,ಡಿ.27- ಚೀನಾದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೆ ರಾಜ್ಯದಲ್ಲೂ ಕೊರೊನಾ ಸೋಂಕು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದು ರಾಜ್ಯದೆಲ್ಲೆಡೆ ಮಾಕ್ ಡ್ರಿಲ್ ನಡೆಸಲಾಯಿತು. ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ರಾಜ್ಯದಲ್ಲಿರುವ ಜಿಲ್ಲೆ, ತಾಲೂಕು ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಕುರಿತ ಆರೋಗ್ಯ ಸೇವೆಗಳ ಮಾಕ್ ಡ್ರಿಲ್ ನಡೆಸಲಾಯಿತು. ನಗರದ ಸಿವಿರಾಮನ್ ಸಾರ್ವಜನಿಕ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಮತ್ತಿತರ ಆಸ್ಪತ್ರೆಗಳಲ್ಲೂ ಕೊರೊನಾ ಚಿಕಿತ್ಸೆ ಅಣಕು ಪ್ರದರ್ಶನಗಳು ನಡೆದವು. ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಯ […]

ಇಂದು ದೇಶಾದ್ಯಂತ ಕೋವಿಡ್ ಮಾಕ್‍ ಡ್ರಿಲ್

ನವದೆಹಲಿ,ಡಿ.27- ಕೋವಿಡ್ ಸೋಂಕಿನಿಂದ ಎದುರಾಗಬಹುದಾದ ಸಂಭವನೀಯ ಸವಾಲುಗಳನ್ನು ನಿಭಾಯಿಸಲು ಆರೋಗ್ಯ ವ್ಯವಸ್ಥೆ ಸಜ್ಜುಗೊಂಡಿರುವುದನ್ನು ಪರೀಕ್ಷಿಸಲು ಇಂದು ದೇಶಾದ್ಯಂತ ಮಾಕ್‍ಡ್ರಿಲ್ ನಡೆದಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಇಂದು ಸರ್ಕಾರಿ , ವೈದ್ಯಕೀಯ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸಂದರ್ಭಕ್ಕೆ ಪ್ರತಿಕ್ರಿಯಿಸಲು ಲಭ್ಯವಿರುವ ಸಂಪನ್ಮೂಲ ಮತ್ತು ಸೌಲಭ್ಯಗಳ ಕುರಿತು ಪರಿಶೀಲನೆ ನಡೆದಿರುವ ಜೊತೆಗೆ ಅಣುಕು ಪ್ರದರ್ಶನ(ಮಾಕ್‍ಡ್ರಿಲ್) ಕೂಡ ನಡೆಸಲಾಯಿತು. ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ ಸಾಮಥ್ರ್ಯ, ಮಾನವ ಸಂಪನ್ಮೂಲ, ತಜ್ಞ ವೈದ್ಯಕೀಯ ಸೇವೆ, ಪರೀಕ್ಷಾ ಸಾಮಥ್ರ್ಯ, ವೈದ್ಯಕೀಯ ಸಾಗಾಣಿಕಾ […]

ವೋಟರ್ ಲಿಸ್ಟ್ ಗೋಲ್‌ಮಾಲ್‌ ; ಗೊಂದಲದಲ್ಲಿ ಮತದಾರರು

ಬೆಂಗಳೂರು,ನ.22- ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮತದಾರರ ಪಟ್ಟಿ ಗೋಲ್‍ಮಾಲ್ ಪ್ರಕರಣದಿಂದ ಮತದಾರರಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದೆ. ಮತ ಪರಿಷ್ಕರಣೆ ನೆಪದಲ್ಲಿ ಮತದಾರರ ಮಾಹಿತಿಗೆ ಕನ್ನ ಹಾಕಲಾಗಿದೆ. ಮತಪಟ್ಟಿಯಿಂದ ಹೆಸರನ್ನು ಕೈಬಿಡಲಾಗಿದೆ. ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಡಿಲಿಟ್ ಮಾಡಿ ಅನ್ಯಾಯ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಎನ್‍ಜಿಒ ಸಂಸ್ಥೆಯೊಂದು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ರಾಜಕೀಯ ಪಕ್ಷವೊಂದಕ್ಕೆ ಅನುಕೂಲವಾಗಲು ಪೂರಕ ಕೆಲಸ ಮಾಡಿರುವುದಲ್ಲದೆ ಹಣಕ್ಕೆ ಮತ ಮಾಹಿತಿಯನ್ನು ಮಾರಾಟ ಮಾಡಿಕೊಂಡಿರುವ […]

ಚಿಲುಮೆ ಕಚೇರಿಯಲ್ಲಿ ಪ್ರಭಾವಿ ಸಚಿವರೊಬ್ಬರ ಚೆಕ್ ಪತ್ತೆ

ಬೆಂಗಳೂರು,ನ.19- ಮತದಾರರ ವೈಯಕ್ತಿಕ ಮಾಹಿತಿ ಕದ್ದ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯಲ್ಲಿ ಪ್ರಭಾವಿ ಸಚಿವರೊಬ್ಬರ ಚೆಕ್, ಬ್ರೋಚರ್ ಹಾಗು ಎನ್‍ವಲಪ್‍ಗಳು ಸಿಕ್ಕಿರುವುದು ಕುತೂಹಲ ಕೆರಳಿಸಿದೆ. ಇದರ ಜೊತೆಗೆ ಹೊಂಬಾಳೆ ಸಂಸ್ಥೆಗೆ ಸೇರಿದ ಕೆಲವು ದಾಖಲೆಗಳು ಸಿಕ್ಕಿವೆ ಎಂಬುದು ತಿಳಿದುಬಂದಿದೆ. ಕಾಂಗ್ರೆಸ್ ಮುಖಂಡರು ಚಿಲುಮೆ ಸಂಸ್ಥೆ ವಿರುದ್ಧ ಮತದಾರರ ವೈಯಕ್ತಿಕ ಮಾಹಿತಿ ಕಳುವು ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಂತೆ ಚಿಲುಮೆ ಸಂಸ್ಥೆಯನ್ನು ಸಂಪೂರ್ಣ ಖಾಲಿ ಮಾಡಲಾಗಿತ್ತು. ಈ ಆರೋಪ ಕುರಿತಂತೆ ಬಿಬಿಎಂಪಿ ಅಧಿಕಾರಿಗಳು ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡುತ್ತಿದ್ದಂತೆ […]

ಚೀನಾ ಗಡಿಯಲ್ಲಿ ಯುದ್ಧ ಟ್ಯಾಂಕರ್ ಗಳನ್ನು ನಿಯೋಜಿಸಿದ ಭಾರತ

ನವದೆಹಲಿ,ಆ.27- ಚೀನಾ-ಭಾರತ ಗಡಿಭಾಗದಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಭಾರತ ಹಗುರವಾದ ಟ್ಯಾಂಕರ್‍ಗಳು, ಶಸ್ತ್ರಸಜ್ಜಿತ ಡ್ರೋಣ್‍ಗಳ ಸಮೂಹವನ್ನು ನಿಯೋಜಿಸಿದೆ. ಚೀನಾದಿಂದ ಭವಿಷ್ಯದಲ್ಲಿ ಬಲವಂತವಾಗಿ ಎದುರಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ, ಪ್ರಾಜೆಕ್ಟ್ ಜೋರ್‍ವಾರ್ ಶುರು ಮಾಡಿದೆ. ಸುಮಾರು 350ಕ್ಕೂ ಹೆಚ್ಚಿನ ದೇಶಿ ನಿರ್ಮಿತ ಹಗುರವಾದ ಟ್ಯಾಂಕರ್‍ಗಳನ್ನು ಗಡಿಭಾಗದಲ್ಲಿ ಸಜ್ಜುಗೊಳಿಸಲಾಗಿದೆ. ಇವು ಅತಿವೇಗವಾಗಿ ಚಲಿಸುವುದಲ್ಲದೆ ಸುಲಭವಾಗಿ ಮತ್ತು ಸಂಚಲನಾತ್ಮಕವಾಗಿ ಪರ್ವತಶ್ರೇಣಿಗಳಲ್ಲಿ ಕಾರ್ಯ ನಿರ್ವಹಿಸಬಲ್ಲವಾಗಿವೆ. ವಾಯುಮಾರ್ಗದಲ್ಲಿ ನಿಗಾವಹಿಸಲು ನವೋದ್ಯಮ ಸಂಸ್ಥೆಯೊಂದರ ಮೂಲಕ ಸಜ್ಜುಗೊಳಿಸಲಾದ ಶಸ್ತ್ರ ಸಜ್ಜಿತ ಡ್ರೋಣ್‍ಗಳನ್ನು ನಿಯೋಜಿಸಲಾಗಿದೆ. ಸ್ವಾಯತ್ತ ನಿಗಾವಣೆ ಮತ್ತು […]