ಸೋನು ನಿಗಮ್ ಮೇಲೆ ಶಾಸಕನ ಪುತ್ರನಿಂದ ಹಲ್ಲೆ

ಮುಂಬೈ,ಫೆ.21-ಬಾಲಿವುಡ್‍ನ ಖ್ಯಾತ ಗಾಯಕ ಸೋನು ನಿಗಮ್ ಅವರ ಮೇಲೆ ಶಾಸಕನ ಪುತ್ರನೊಬ್ಬ ಹಲ್ಲೆ ನಡೆಸಿರುವ ಪ್ರಕರಣ ಮುಂಬೈನಲ್ಲಿ ನಡೆದಿದೆ. ಚೆಂಬೂರಿನಲ್ಲಿ ನಡೆಯುತ್ತಿದ್ದ ಸಂಗಿತೋತ್ಸವ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದ ಸಮಯದಲ್ಲಿ ಸೋನು ನಿಗಮ್ ಅವರ ಮೇಲೆ ಸ್ವಪ್ನಿಲ್ ಫಾಟರ್‍ಪೇಕರ್ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸೋನು ನಿಗಮ್ ಅವರ ಅಪ್ತ ಸಹಾಯಕರೊಬ್ಬರಿಗೂ ತೀವ್ರ ಪೆಟ್ಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದಾಗ ಹಿಂದಿನಿಂದ ಬಂದ ವ್ಯಕ್ತಿ ನನ್ನನ್ನು ತಳ್ಳಿದ […]