ನಾಲ್ಕು ಹೈಕೋರ್ಟ್‍ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

ನವದೆಹಲಿ,ಫೆ.12- ಗುಜರಾತ್, ರಾಜಸ್ಥಾಮ ಸೇರಿ ನಾಲ್ಕು ಹೈಕೋರ್ಟ್‍ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಕಾನೂನು ಸಚಿವ ಕಿರಣ್ ರಿಜಿಜು ಅವರು ಇಂದು ಟ್ವಿಟರ್‍ನಲ್ಲಿ ಹೊಸ ನೇಮಕಾತಿಗಳನ್ನು ಪ್ರಕಟಿಸಿದ್ದಾರೆ. ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಸೋನಿಯಾ ಗಿರಿಧರ್ ಗೋಕಣಿ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ. ಹಿಂದಿನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ಸುಪ್ರೀಂಕೋರ್ಟ್‍ಗೆ ಬಡ್ತಿ ನೀಡಲಾಗಿತ್ತು. ತೀವ್ರ ಸ್ವರೂಪಕ್ಕೆ ತಿರುಗಿದ ಇಸ್ರೇಲಿಗಳ ಪ್ರತಿಭಟನೆ ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನು ಗೌಹಾಟಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ, ಒರಿಸ್ಸಾ ಹೈಕೋರ್ಟ್ […]
ಕುಸ್ತಿ ಫೆಡರೇಷನ್‍ಗೆ ಉಸ್ತುವಾರಿ ಸಮಿತಿ ರಚನೆ : 3 ದಿನಗಳ ಧರಣಿ ಅಂತ್ಯ

ನವದೆಹಲಿ,ಜ.21- ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರ ಪದಚ್ಯುತಿ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ತನಿಖೆಗೆ ಉಸ್ತುವಾರಿ ಸಮಿತಿಯನ್ನು ರಚನೆ ಸೇರಿದಂತೆ ಹಲವು ಭರವಸೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕುಸ್ತಿ ಪಟುಗಳ ಪ್ರತಿಭಟನೆ ನಿನ್ನೆ ತಡ ರಾತ್ರಿ ಅಂತ್ಯಗೊಂಡಿದೆ. ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಅನುರಾಗ್‍ಸಿಂಗ್ ಠಾಕೂರ್ ಅವರೊಂದಿಗೆ ನಡೆದ ಸುದೀರ್ಘ ಮಾತುಕತೆಯಲ್ಲಿ ಕೆಲ ಸ್ಪಷ್ಟ ಭರವಸೆಗಳು ದೊರೆತಿದ್ದವು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಜಂಟಿ […]
ಅಣ್ಣಾಮಲೈಗೆ ಝಡ್ ಕ್ಯಾಟಗರಿ ಭದ್ರತೆ

ಚೆನ್ನೈ,ಜ.13- ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಝಡ್ ಕೆಟಗರಿ ಭದ್ರತೆಯನ್ನು ಒದಗಿಸಿದೆ. ಇನ್ನು ಮುಂದೆ ಅಣ್ಣಾಮಲೈಗೆ 33 ಮಂದಿ ಕಮಾಂಡೋಗಳು ಹಾಗೂ ಸ್ಥಳೀಯ ಪೊಲೀಸರು ಭದ್ರತೆಯನ್ನು ಒದಗಿಸಲಿದ್ದಾರೆ. ಈ ಮೊದಲು ಅಣ್ಣಾಮಲೈಗೆ ಕೇಂದ್ರ ಸರ್ಕಾರ ವೈ ಕೆಟಗರಿ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ ಇತ್ತೀಚೆಗೆ ಅವರಿಗೆ ಪದೇ ಪದೇ ಕೆಲವು ಧಾರ್ಮಿಕ ಮೂಲಭೂತವಾದಿಗಳು ಹಾಗೂ ನಕ್ಸಲ್ ಸಂಘಟನೆಯಿಂದ ಪ್ರಾಣಬೆದರಿಕೆ ಬರುತ್ತಿದ್ದ ಹಿನ್ನೆಲೆಯಲ್ಲಿ […]
ವೋಟರ್ ಐಡಿ ಹಗರಣ: ಬಿಬಿಎಂಪಿ ಮುಖ್ಯ ಆಯುಕ್ತರ ಎತ್ತಂಗಡಿ ಸಾಧ್ಯತೆ

ಬೆಂಗಳೂರು,ನ.29- ಮತದಾರರ ಪಟ್ಟಿ ಅಕ್ರಮ ಹಗರಣ ವ್ಯಾಪಕ ಸದ್ದು ಮಾಡುತ್ತಿದ್ದಂತೆ ಬಿಬಿಎಂಪಿಯಲ್ಲಿ ಆಯುಕ್ತರ ತಲೆ ದಂಡಕ್ಕೆ ಕ್ಷಣಗಣನೆಗಳು ಶುರುವಾಗಿವೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಎತ್ತಂಗಡಿ ಮಾಡಿ ಸಮರ್ಥ ಅಧಿಕಾರಿಗಳನ್ನು ನೇಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಬಿಬಿಎಂಪಿಯ ಅಪರ ಚುನಾವಣಾಧಿಕಾರಿಗಳಾಗಿರು ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ್ದು, ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ. ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿ ಯಶಸ್ವಿಯಾಗಿ ಅಧಿಕಾರ ನಡೆಸಿದ್ದ ಮಂಜುನಾಥ್, ಗೌರವ್‍ಗುಪ್ತ ಅಥವಾ ರಾಜೇಶ್ ಗೌಡ ಅವರಲ್ಲಿ ಒಬ್ಬರನ್ನು […]
AICC ಕಚೇರಿಯಲ್ಲಿ ಇನ್ನು ಕಾಣಿಸಿಕೊಳ್ಳದ ಖರ್ಗೆ ಭಾವಚಿತ್ರ

ನವದೆಹಲಿ,ನ.22-ಎಐಸಿಸಿ ಅಧ್ಯಕ್ಷ ಗಾದಿಗೆ 24 ವರ್ಷಗಳ ನಂತರ ಗಾಂಧಿಯೇತರ ವ್ಯಕ್ತಿಯಾಗಿರುವ ಕರ್ನಾಟಕದ ಹೆಮ್ಮೆಯ ಪುತ್ರ ಮಲ್ಲಿಕಾರ್ಜುನ ಖರ್ಗೆ ಅವರು ನೇಮಕಗೊಂಡಿದ್ದಾರೆ. ಅವರು ಅಧಿಕಾರ ವಹಿಸಿಕೊಂಡು ತಿಂಗಳು ಕಳೆದರೂ ಎಐಸಿಸಿ ಕಚೇರಿಯಲ್ಲಿ ಅವರ ಭಾವಚಿತ್ರ ಹಾಕಲು ಸಾಧ್ಯವಾಗಿಲ್ಲ. ಇದನ್ನು ಗಮನಿಸಿದರೆ, ಗಾಂಧಿ ಕುಟುಂಬದ ಪ್ರಾಬಲ್ಯ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಜೀವಂತ ಉದಾಹರಣೆಯಾಗಿದೆ. ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ಅವರುಗಳು ಎಐಸಿಸಿ ಅಧ್ಯಕ್ಷರಾಗಿದ್ದಾಗ ಎಲ್ಲ ಸರಿಯಾಗಿಯೇ ಇತ್ತು. ಅವರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಮತ್ತು ಸವಲತ್ತುಗಳು ಸಿಕ್ಕಿದ್ದವು. ಆದರೆ, ನಮ್ಮ ಖರ್ಗೆ ಸಾಹೇಬರಿಗೆ […]
ಸೋಮವಾರ ಕಾಂಗ್ರೆಸ್ ಕಾರ್ಯಪಡೆಯೊಂದಿಗೆ ಖರ್ಗೆ ಮೊದಲ ಸಭೆ

ನವದೆಹಲಿ,ನ.12- ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಾರ್ಯಪಡೆ ಸಭೆ ನಡೆಸಲಿದ್ದಾರೆ. ಮುಂಬರುವ 2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಕಾಂಗ್ರೆಸ್ ಕಾರ್ಯಪಡೆ ಸದಸ್ಯರೊಂದಿಗೆ ಸೋಮವಾರ ಖರ್ಗೆ ಅವರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾರ್ಯಪಡೆಯ ಮೊದಲ ಸಭೆ ಇದಾಗಿದೆ. ಕಾರ್ಯಪಡೆಯ ಸದಸ್ಯರು 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ರೂಪಿಸಲಾಗಿರುವ ಕಾರ್ಯತಂತ್ರಗಳ ಬಗ್ಗೆ ಖರ್ಗೆ ಅವರಿಗೆ ವಿವರಿಸಲಿದ್ದಾರೆ. ನಡುರಸ್ತೆಯಲ್ಲಿ […]
ಕರ್ತವ್ಯಲೋಪವೆಸಗಿದ ಅರಣ್ಯಾಧಿಕಾರಿಗೆ ಕೋಕ್

ಬೆಂಗಳೂರು,ಅ.21-ಅಪಾಯದ ಸ್ಥಿತಿಯಲ್ಲಿರುವ ರಸ್ತೆ ಬದಿ ಮರಗಳ ಕೊಂಬೆಗಳನ್ನು ತೆರವುಗೊಳಿಸುವಲ್ಲಿ ವಿಫಲರಾದ ಯಲಹಂಕ ಉಪ ವಲಯ ಅರಣ್ಯಾಧಿಕಾರಿಯನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍ಗಿರಿನಾಥ್ ಅವರು ಆದೇಶಿಸಿದರು. ಹೈದ್ರಾಬಾದ್‍ನಲ್ಲಿ ಇಡಿ ದಾಳಿ, 150 ಕೋಟಿ ಆಸ್ತಿ ವಶ ಯಲಹಂಕ ವಲಯದಲ್ಲಿ ಇಂದು ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ ಸಂದರ್ಭದಲ್ಲಿ ಅವರು ರಸ್ತೆ ಬದಿ ಮರಗಳ ಕೊಂಬೆಗಳನ್ನು ತೆರವುಗೊಳಿಸದ ಉಪ ವಲಯ ಅರಣ್ಯಾಧಿಕಾರಿ ಆರ್.ಕೃಷ್ಣ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸುವಂತೆ ಅನ ಅಧಿಕಾರಿಗಳಿಗೆ ಸೂಚಿಸಿದರು. ನಂತರ […]
ತಂತ್ರಜ್ಞಾನ ಮೂಲಕ ಕುತಂತ್ರ: ಚೀನಾ ವಿರುದ್ಧ ಬ್ರಿಟನ್ ಗರಂ

ಲಂಡನ್ , ಅ. 12 – ಆರ್ಥಿಕ ಮತ್ತು ತಾಂತ್ರಿಕ ಪ್ರಭಾವವನ್ನು ಬಳಸಿ ಅಂತರರಾಷ್ಟ್ರೀಯ ಭದ್ರತೆಯ ನಿಯಮಗಳ ಮೇಲೆ ಹಿಡಿತ ಸಾಧಿಸಲು ಚೀನಾ ಹವಣಿಸುತ್ತಿದೆ ಎಂದು ಬ್ರಿಟನ್ ಸೈಬರ್‍ಗುಪ್ತಚರ ಸಂಸ್ಥೆ ಹೇಳಿದೆ. ಬೀಜಿಂಗ್‍ನ ಹೊಸ ನಿಯಮ ರಚಿಸುವ ಪ್ರಯತ್ನ ನಮ್ಮ ಭವಿಷ್ಯವದ ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ ಎಂದು ಜಿಸಿಎಸ್‍ಕ್ಯೂನ ನಿರ್ದೇಶಕ ಜೆರೆಮಿ ಫ್ಲೆಮಿಂಗ ಹೇಳಿದ್ದಾರೆ. ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಚೀನೀ ರಾಜಕೀಯ ಪ್ರೇರಿತ ಕ್ರಮಗಳು ಹೆಚ್ಚು ತುರ್ತು ಸಮಸ್ಯೆಯಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಪರಿಹರಿಸಬೇಕು ಎಂದು […]
ಬಿಸಿಸಿಐ ಅಧ್ಯಕ್ಷರಾಗಿ ಕರ್ನಾಟಕದ ಬಿನ್ನಿ ಆಯ್ಕೆ..?

ನವದೆಹಲಿ.ಅ.11- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ನೂತನ ಅಧ್ಯಕ್ಷರಾ ರೇಸ್‍ನಲ್ಲಿ 1983ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಕರ್ನಾಟಕದ ರೋಜರ್ ಬಿನ್ನಿ ಹೆಸರು ಕೇಳಿಬಂದಿದೆ.ಸದ್ಯದಲ್ಲೇ ಅಧಿಕಾರ ಪೂರ್ಣಗೊಳಿಸಲಿರುವ ಸೌರವ್ ಗಂಗೂಲಿ ಅವರ ಸ್ಥಾನವನ್ನು ಬಿನ್ನಿ ತುಂಬಲಿದ್ದಾರೆಂದು ಎಂದು ಮೂಲಗಳು ತಿಳಿಸಿವೆ. ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಇನ್ನು ರಾಜಿವ್ ಶುಕ್ಲಾ ಬಿಸಿಸಿಐ ಉಪಾಧ್ಯಕ್ಷರಾಗಲಿದ್ದು, ಐಪಿಎಲ್ ಅಧ್ಯಕ್ಷರಾಗಿ ಅರುಣ್ ಧುಮಾಲ್ ಆಯ್ಕೆಯಾಗಲಿದ್ದಾರೆ. ಖಜಾಂಚಿ ಸ್ಥಾನಕ್ಕೆ ಆಶಿಶ್ ಶೆಲರ್ ಪಕ್ಕ ಎಂದು ಹೇಳಲಾಗಿದೆ. ಆದರೆ, ಅಧಿಕೃತ ಮಾಹಿತಿ […]
ವಸುದೈವ ಕುಟುಂಟ ಪರಿಕಲ್ಪನೆಯ ಭಾರತದಲ್ಲಿ ಹಿಟ್ಲರ್ ಹುಟ್ಟಲು ಸಾಧ್ಯವಿಲ್ಲ : ಭಾಗವತ್
ನವದೆಹಲಿ,ಸೆ.24- ನಮ್ಮದು ವಸುದೈವ ಕುಟಂಬ ಪರಿಕಲ್ಪನೆ ಹೀಗಾಗಿ ನಮ್ಮಿಂದ ಯಾವುದೇ ದೇಶಕ್ಕೆ ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಸಂಕಲ್ಪ್ ಫೌಂಡೇಷನ್ ಆಯೋಜಿಸಿದ್ದ ಉಪನ್ಯಾಸ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದಿಂದ ಯಾವುದೆ ದೇಶಕ್ಕೆ ಬೆದರಿಕೆ ಒಡ್ಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ರಾಷ್ಟ್ರೀಯತೆಯು ಇತರರಿಗೆ ಯಾವುದೇ ಬೆದರಿಕೆಯನ್ನು ಉಂಟುಮಾಡುವುದಿಲ್ಲ . ಅದು ನಮ್ಮ ಸ್ವಭಾವವಲ್ಲ. ನಮ್ಮ ರಾಷ್ಟ್ರೀಯತೆಯು ಪ್ರಪಂಚವೆ ಒಂದು ಕುಟುಂಬ ಎಂಬ ವಸುದೈವ ಕುಟುಂಬದ […]