ಹದಿಹರೆಯದವರನ್ನೇ ಟಾರ್ಗೆಟ್ ಮಾಡುತ್ತಿದೆ ಕಿಲ್ಲರ್ ಕೊರೊನಾ..!

ಬೆಂಗಳೂರು,ಜ.7- ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ಕೋವಿಡ್-19 ಸೋಂಕು ಅವ್ಯಾಹತವಾಗಿ ಏರಿಕೆಯಾಗುತ್ತಿದೆ. ನವೆಂಬರ್ 1ರಿಂದ ಜನವರಿ 2ರವರೆಗೆ ಕೋವಿಡ್ ವಾರ್‍ರೂಮ್‍ನಲ್ಲಿ ದಾಖಲಾಗಿರುವ ಅಂಕಿ ಅಂಶಗಳು ಆತಂಕ ಮೂಡಿಸಿವೆ. ವಿಶ್ಲೇಷಣೆಯಲ್ಲಿ 1ರಿಂದ 9 ಮತ್ತು 10ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಕೋವಿಡ್ ಸೋಂಕಿನಲ್ಲಿ ಏರುಪೇರು ಕಂಡಿದೆ. ಡಿ.9ರಿಂದ ಡಿ.19ರವರೆಗೆ ಶೇ.31.23ರಷ್ಟು ಹೆಚ್ಚಳವಾಗಿದ್ದು, ಡಿ.13ರಿಂದ ಡಿ.26ರವರೆಗೆ ಶೇಕಡಾ 40.03ರಷ್ಟಾಗಿದೆ. ಅದು ಡಿ.20ರಿಂದ ಜ.2ರವರೆಗೆ ಮತ್ತಷ್ಟು ಶೇ.69.92ಕ್ಕೆ ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ. ಈ ರೀತಿ ಸತತ ಏರಿಕೆ ವಯಸ್ಕರಲ್ಲಿ ಕೂಡ ಕಂಡುಬಂದಿದೆ. […]