BIG NEWS : ಚಿಲುಮೆ ಸಂಸ್ಥೆ ಎನ್‌ಜಿಓ ಅಲ್ಲವೇ ಅಲ್ಲ

ಬೆಂಗಳೂರು,ಡಿ.9- ಚಿಲುಮೆ ಸಂಸ್ಥೆ ಎಂಬುದು ಎನ್ ಜಿ ಓ ಅಲ್ಲವೇ ಅಲ್ಲ ಎಂಬ ರೋಚಕ ಸಂಗತಿ ಹೊರಬಿದ್ದಿದೆ.ಲಾಭದ ಉದ್ದೇಶವಿಲ್ಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಎಂದು ವೇಷ ಹಾಕಿದ ಅನೇಕ ಅಕ್ರಮ ನಡೆಸಿರುವುದು ತನಿಖೆ ವೇಳೆ ತಿಳಿದುಬಂದಿದೆ. ಚಿಲುಮೆ ಎಜುಕೇಶನಲ್ ಆಂಡ್ ಕಲ್ಚರಲ, ರೂರಲ್ ಡೆವಲಪ್ಮೆಂಟ್ ಎಂಬ ಹೆಸರೇ ಬೋಗಸ್ ಆಗಿದ್ದು ನೊಂದಣಿಯನ್ನೂ ಪರಿಶೀಲನೆ ಮಾಡದೇ ಕೆಲಸ ಕೊಟ್ಟಿರುವ ಬಿಬಿಎಂಪಿ ನಡೆ ಅನುಮಾನಕ್ಕೆ ಎಡೆಮಾಡಿದೆ.ಕಾಪೆರ್ರೇಟ್ ನಿಯಮಗಳ ಪ್ರಕಾರ ನೊಂದಣಿಯಾಗಿದ್ದು ಚಿಲುಮೆ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದೆ. ಚುನಾವಣಾ ಜಾಗೃತಿಗೆ […]

ವೋಟರ್ ಐಡಿ ಹಗರಣ : ಹಣಕಾಸು ವಹಿವಾಟಿನ ಬಗ್ಗೆ ತನಿಖೆ ತೀವ್ರ

ಬೆಂಗಳೂರು, ನ.27-ಮತದಾರರ ಪಟ್ಟಿ ಅಕ್ರಮದಲ್ಲಿ ಈವರೆಗೂ 11 ಮಂದಿ ಬಂಧನವಾಗಿದ್ದು, ಪೊಲೀಸರು ಹಗರಣದಲ್ಲಿನ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ಕಲೆಹಾಕಲಾರಂಭಿಸಿದ್ದಾರೆ. ಚುನಾವಣಾ ಆಯೋಗದ ಉಸ್ತುವಾರಿಯಲ್ಲಿ ನಡೆಯುತ್ತಿರುವ ತನಿಖೆ ದಿನೇ ದಿನೇ ಗಂಭೀರತೆ ಪಡೆದುಕೊಳ್ಳುತ್ತಿದೆ. ಹಗರಣದಲ್ಲಿ ಪ್ರಮುಖವಾಗಿ ಕೇಳಿ ಬಂದ ಚಿಲುಮೆ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ನಿನ್ನೆ ಬಿಬಿಎಂಪಿ ನಾಲ್ಕು ಮಂದಿ ಚುನಾವಣಾಕಾರಿ(ಆರ್‍ಒ) ಮತ್ತು ಒಬ್ಬ ಮಧ್ಯವರ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಚಿಲುಮೆ ಸಂಸ್ಥೆ ತನ್ನ ಸಿಬ್ಬಂದಿಗಳಿಂದ ಮತದಾರರ ಮಾಹಿತಿ ಸಂಗ್ರಹಿಸಲು ಅನುಕೂಲ ಮಾಡಿಕೊಡುವ ಸಲುವಾಗಿ […]

ಬಿಬಿಎಂಪಿ ಆಂತರಿಕ ತನಿಖೆಯಲ್ಲೂ ಬಯಲಾಯ್ತು ‘ಚಿಲುಮೆ’ ಅಕ್ರಮ

ಬೆಂಗಳೂರು,ನ.26- ಚಿಲುಮೆ ಸಂಸ್ಥೆ ನಡೆಸಿರುವ ಅಕ್ರಮಗಳು ಬಿಬಿಎಂಪಿ ನಡೆಸಿದ ಆಂತರಿಕ ತನಿಖೆಯಲ್ಲೂ ಸ್ಪಷ್ಟವಾಗಿದೆ. ತನಿಖೆ ನಡೆಸಿದ ಬಿಬಿಎಂಪಿ ಹಿರಿಯ ಅಧಿಕಾರಿಗಳು ಬಿಎಲ್‍ಓಗಳು ನೀಡಿದ ಉತ್ತರ ಕೇಳಿ ಶಾಕ್ ಆಗಿದ್ದಾರೆ. ಅದೇನು ಅಂದರೆ ನೀವೂ ಬೆಚ್ಚಿ ಬೀಳೋದು ಗ್ಯಾರಂಟಿ. ಅದೇನು ಅಂತೀರಾ… ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಚಿಲುಮೆ ಸಂಸ್ಥೆಯವರು ಎಸಿ ರೂಮಿನಲ್ಲಿ ಕುಳಿತುಕೊಂಡೇ ಮಾಡುತ್ತಿದ್ದರಂತೆ. ಅದರಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಕ್ಷಣ ಮಾತ್ರದಲ್ಲಿ ಆಗುತ್ತಿತ್ತು. ಕೇವಲ ಒಂದು ಬಟನ್ ಒತ್ತುವ ಮೂಲಕ ಮತದಾರರ ಹೆಸರುಗಳನ್ನು ಕ್ಷಣ ಮಾತ್ರದಲ್ಲಿ […]

ಅಕ್ರಮದ ನಡುವೆಯೆ ‘ಚಿಲುಮೆ’ಯಿಂದ ಟೆಂಡರ್ ಲಾಬಿ

ಬೆಂಗಳೂರು, ನ.25- ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಟೀಕೆಗೆ ಗುರಿಯಾಗಿರುವ ಚಿಲುಮೆ ಸಂಸ್ಥೆ ತನ್ನ ಮೇಲಿನ ಆರೋಪದ ಹೊರತಾಗಿಯೂ ಮತ್ತೊಂದು ಟೆಂಡರ್ ಪಡೆಯಲು ಲಾಬಿ ನಡೆಸಿರುವುದು ಬೆಳಕಿಗೆ ಬಂದಿದೆ.ಬಿಬಿಎಂಪಿ ವತಿಯಿಂದ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಕಲ್ಯಾಣ ಸಮಿತಿ ವಿಭಾಗ ಈ ಕುರಿತು ಟೆಂಡರ್ ಅನ್ನು ಆಹ್ವಾನಿಸಿದೆ. ಚಿಲುಮೆ ಸಂಸ್ಥೆ ಟೆಂಡರ್ ಗೆ ಬಿಡ್ ಸಲ್ಲಿಸಿದ್ದು, ಗುತ್ತಿಗೆ ಪಡೆದುಕೊಳ್ಳಲು ಹರಸಾಹಸ ನಡೆಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರೂ ಸೇರಿದಂತೆ ಭಾರಿ ಪ್ರಭಾವ ಬಳಸಿ ಟೆಂಡರ್ ಗಿಟ್ಟಿಸುವ ಯತ್ನ […]

ವೋಟರ್ ಐಡಿ ಹಗರಣ : ಕೇಂದ್ರ ಚುನಾವಣಾ ಆಯೋಗದಿಂದ ಪರಿಶೀಲನೆ

ಬೆಂಗಳೂರು,ನ.24- ಮತದಾರರ ವೈಯಕ್ತಿಕ ಮಾಹಿತಿ ಕಳುವು ಮಾಡಿರುವ ಚಿಲುಮೆ ಸಂಸ್ಥೆ ಹಗರಣ ಕೇಂದ್ರ ಚುನಾವಣಾ ಆಯೋಗದ ನಿದ್ದೆಗೆಡಿಸಿದೆ. ಚಿಲುಮೆ ಸಂಸ್ಥೆ ವಿರುದ್ಧ ಕೇಳಿ ಬಂದಿರುವ ಆರೋಪದ ಹಿನ್ನಲೆಯಲ್ಲಿ ಪ್ರಕರಣದ ಜಾಡು ಪತ್ತೆ ಹಚ್ಚಲು ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತರು ನಗರಕ್ಕೆ ಆಗಮಿಸಿದ್ದಾರೆ. ನಗರದಲ್ಲಿ ಬೀಡುಬಿಟ್ಟಿರುವ ಉಪ ಆಯುಕ್ತರು ಇಂದು ನಗರದ 28 ಕ್ಷೇತ್ರಗಳ ಮತದಾರರನೋಂದಣಿ ಅಧಿಕಾರಿಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಕಳೆದ ಜ.1ರಿಂದ ಇಲ್ಲಿಯವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿರುವ ಮತ್ತು ತೆಗೆದು […]

ವೋಟರ್ ಐಡಿ ಹಗರಣ: ರಾಜಕಾರಣಿಗಳ ಸಂಪರ್ಕದ ಬಗ್ಗೆ ಬಾಯಿ ಬಿಡದ `ಚಿಲುಮೆ’ ರವಿ

ಬೆಂಗಳೂರು,ನ.24- ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಪೊಲೀಸರು ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ರಾಜಕೀಯ ಒತ್ತಡದ ಕಾರಣಕ್ಕಾಗಿ ತಾವು ದತ್ತಾಂಶಗಳನ್ನು ಸಂಗ್ರಹಿಸಿದ್ದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಒತ್ತಡ ಹೇರಿದ ರಾಜಕಾರಣಿಗಳು ಯಾರು ಎಂಬ ವಿಷಯವನ್ನು ರವಿಕುಮಾರ್ ಬಾಯಿ ಬಿಡದೆ ಸತಾಯಿಸುತ್ತಿದ್ದಾರೆ. ತೀವ್ರ ಸಂಚಲನ ಮೂಡಿಸಿರುವ ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ರವಿಕುಮಾರ್ ಹೇಳಿಕೆಗಳು ಮಹತ್ವದಾಗಿದೆ. ಹೀಗಾಗಿ ಸಮಗ್ರ ಮಾಹಿತಿ ಕಲೆಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ ಬುದ್ದಿವಂತಿಕೆಯಿಂದ ವರ್ತಿಸುತ್ತಿರುವ ರವಿಕುಮಾರ್ ವಿಚಾರಣೆ ಸಂದರ್ಭದಲ್ಲಿ […]

ವೋಟರ್ ಐಡಿ ಹಗರಣಕ್ಕೆ ಮಹತ್ವದ ಟ್ವಿಸ್ಟ್..?!

ಬೆಂಗಳೂರು, ನ.22- ಮತದಾರರ ಪಟ್ಟಿ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿರುವ ಹಲಸೂರು ಗೇಟ್ ಠಾಣೆ ಪೊಲೀಸರು ಎಲೆಕ್ಟ್ರಾನಿಕ್ ಡಿವೈಸ್‍ಗಳ ವಿಶ್ಲೇಷಣೆಗಳಿಂದ ಮತ್ತಷ್ಟು ಮಾಹಿತಿ ದೊರೆಯುವ ನಿರೀಕ್ಷೆಯಲ್ಲಿದ್ದು, ತನಿಖೆಗೆ ಮಹತ್ವದ ತಿರುವು ದೊರೆಯುವ ಸಾಧ್ಯತೆ ಇದೆ. ಅಕ್ರಮದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಚಿಲುಮೆ ಸಂಸ್ಥೆ ಸಾಫ್ಟ್‍ವೇರ್ ಇಂಜಿನಿಯರ್‍ಗಳಿಂದ ಸಮೀಕ್ಷಾ ಎಂಬ ಖಾಸಗಿ ಆಪ್ ಅಭಿವೃದ್ಧಿ ಪಡಿಸಿತು. ಅದರಲ್ಲಿ ಮತದಾರರ ಹೆಸರು, ಮೊಬೈಲ್ ಸಂಖ್ಯೆ, ಸಂಪರ್ಕ ವಿಳಾಸ, ಜಾತಿ, ಧರ್ಮ, ಉದ್ಯೋಗ ಸೇರಿದಂತೆ ಹಲವಾರು ಮಾಹಿತಿಗಳ ಕಾಲಂಗಳು ಅಡಕವಾಗಿದ್ದವು. ಚುನಾವಣಾ […]

ವೋಟರ್ ಐಡಿ ಹಗರಣ : ಚಿಲುಮೆ ರವಿಗೆ ಡ್ರಿಲ್

ಬೆಂಗಳೂರು,ನ.21- ಮತದಾರರ ಮಾಹಿತಿ ಕಳವು ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಎಂಬಾತನನ್ನು ಬಂಧಿಸಿರುವ ಹಲಸೂರು ಗೇಟ್ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯುತ್ತಿದ್ದಾರೆ. ಚಿಲುಮೆ ಸಂಸ್ಥೆಯನ್ನು ಯಾವಾಗ, ಯಾವ ಉದ್ದೇಶಕ್ಕಾಗಿ ಸ್ಥಾಪಿಸಿದ್ದೀರಿ ಇದರ ಕಾರ್ಯ ವೈಖರಿ ಏನು ಎಷ್ಟು ಮಂದಿ ನಿರ್ದೇಶಕರು ಹಾಗು ಸಿಬ್ಬಂ ಇದ್ದಾರೆ ಅವರುಗಳ ಕೆಲಸವೇನು. ಈ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ಕೊಡಿಸಿದವರು ಯಾರು ಯಾವ ಯಾವ ಮಾಹಿತಿಗಳನ್ನು ಸಂಗ್ರಹಿಸಿದ್ದೀರಿ ಯಾವ ಯ್ಯಾಪ್ ತಯಾರಿಸಿ […]

ಚಿಲುಮೆ ಕಚೇರಿಯಲ್ಲಿ ಪ್ರಭಾವಿ ಸಚಿವರೊಬ್ಬರ ಚೆಕ್ ಪತ್ತೆ

ಬೆಂಗಳೂರು,ನ.19- ಮತದಾರರ ವೈಯಕ್ತಿಕ ಮಾಹಿತಿ ಕದ್ದ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯಲ್ಲಿ ಪ್ರಭಾವಿ ಸಚಿವರೊಬ್ಬರ ಚೆಕ್, ಬ್ರೋಚರ್ ಹಾಗು ಎನ್‍ವಲಪ್‍ಗಳು ಸಿಕ್ಕಿರುವುದು ಕುತೂಹಲ ಕೆರಳಿಸಿದೆ. ಇದರ ಜೊತೆಗೆ ಹೊಂಬಾಳೆ ಸಂಸ್ಥೆಗೆ ಸೇರಿದ ಕೆಲವು ದಾಖಲೆಗಳು ಸಿಕ್ಕಿವೆ ಎಂಬುದು ತಿಳಿದುಬಂದಿದೆ. ಕಾಂಗ್ರೆಸ್ ಮುಖಂಡರು ಚಿಲುಮೆ ಸಂಸ್ಥೆ ವಿರುದ್ಧ ಮತದಾರರ ವೈಯಕ್ತಿಕ ಮಾಹಿತಿ ಕಳುವು ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಂತೆ ಚಿಲುಮೆ ಸಂಸ್ಥೆಯನ್ನು ಸಂಪೂರ್ಣ ಖಾಲಿ ಮಾಡಲಾಗಿತ್ತು. ಈ ಆರೋಪ ಕುರಿತಂತೆ ಬಿಬಿಎಂಪಿ ಅಧಿಕಾರಿಗಳು ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡುತ್ತಿದ್ದಂತೆ […]

ಕದ್ದ ಮಾಹಿತಿಯನ್ನು ಚುನಾವಣೆ ವೇಳೆ ಮಾರಿಕೊಳ್ಳಲು ಮುಂದಾಗಿತ್ತಾ ಚಿಲುಮೆ ಸಂಸ್ಥೆ..!

ಬೆಂಗಳೂರು,ನ.19- ಚಿಲುಮೆ ಸಂಸ್ಥೆಯಿಂದ ಓಟರ್ ಐಡಿ ಡಿಲೀಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುತ್ತಿದೆ. ಮತದಾರರ ವೈಯಕ್ತಿಕ ಮಾಹಿತಿ ಕಳುವು ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಚಿಲುಮೆ ಸಂಸ್ಥೆಯವರು ತಾವು ಕಳುವು ಮಾಡಿದ್ದ ಮಾಹಿತಿಯನ್ನು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಮಾರಾಟ ಮಾಡಿಕೊಳ್ಳಲು ತೀರ್ಮಾನಿಸಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಮತದಾರರ ಮಾಹಿತಿ ಕಲೆ ಹಾಕಲು ಚಿಲುಮೆ ಸಂಸ್ಥೆಯವರು ಈ ಹಿಂದೆ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವುದಕ್ಕೆ ಇದೀಗ ಸಾಕ್ಷಿ ದೊರೆತಿದೆ. ಕಾಲೇಜು ವಿದ್ಯಾರ್ಥಿಗಳ ಐಡಿ ಕಾರ್ಡ್ ಬಳಕೆ ಮಾಡಿಕೊಂಡು ಚಿಲುಮೆ […]