ಭಾರತದ ವಿರುದ್ಧ ಚೀನಾ ಷಡ್ಯಂತ್ರ, ಹರಕೆಯ ಕುರಿಯಾಗುತ್ತಿರುವ ಪಾಕ್..?

ಇಸ್ಲಮಾಬಾದ್, ಜ.27- ಪಾಕಿಸ್ತಾನವು ಭರತದ ಜತೆಗೆ ನಿರಂತರ ಸಂಘರ್ಷದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ಕ್ರಮವಾಗಿ ಚೀನಾ ದೇಶವು ಪಾಕ್‍ಗೆ ತಾನು ನಿರ್ಮಿಸಿರುವ ವಾಹನ ಚಾಲಿತ ಹೂವಿಟ್ಜರ್ ಫಿರಂಗಿಗಳು ಸೇರಿದಂತೆ ಹಲವಾರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ. ಭಾರತದ ಕೆ-9 ವಜ್ರ ಹೂವಿಟ್ಜರ್ ಫಿರಂಗಿಗಳಿಗೆ ಪ್ರತಿಯಾಗಿ ಇದನ್ನು ಪೂರೈಸಲಾಗಿದೆ ಎಂದು ಹೇಳಲಾಗಿದೆ. ಬೀಜಿಂಗ್ ರಾವಲ್ಪಿಂಡಿಗೆ ನಾರಿಂಕೋ ಎಆರ್-1 300ಮಿ.ಮೀ. ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್‍ಗಳನ್ನು ಸರಬರಾಜು ಮಾಡುತ್ತಿದೆ. ಇದರಿಂದ ಪಾಕಿಸ್ತಾನ ಸೇನೆಯು ಭಾರತದ ರಾಕೆಟ್ ಲಾಂಚರ್‍ಗಳಿಗೆ ಪ್ರತ್ಯುತ್ತರ ನೀಡಲು ಸಾಧ್ಯವಾಗುತ್ತದೆ ಎನ್ನುವುದು […]