565 ಕೋಟಿ ರೂ. ಚಿಟ್ ಫಂಡ್ ಅಕ್ರಮ ಪ್ರಕರಣ : ಸಿಬಿಐನಿಂದ ನಾಲ್ವರ ಬಂಧನ
ಕೋಲ್ಕತ್ತಾ, ಸೆ.28 – ಸುಮಾರು 565 ಕೋಟಿ ರೂ. ಚಿಟ್ ಫಂಡ್ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಕೋಲ್ಕತ್ತಾದಲ್ಲಿ ಇಂದು ದಾಳಿ ನಡೆಸಿ ಕಂಪನಿ ವ್ಯವಹಾರಗಳ ಮಾಜಿ ಉಪ ರಿಜಿಸ್ಟ್ರಾರ್ ಮತ್ತು ಇತರೆ ಮೂವರನ್ನು ಬಂಧಿಸಿದೆ. ಖಾಸಗಿ ಕಂಪನಿಗಳ ಸಂಸ್ಥಾಪಕ ನಿರ್ದೇಶಕರು ಮತ್ತು ಇಬ್ಬರು ಪ್ರಾದೇಶಿಕ ವ್ಯವಸ್ಥಾಪಕರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನಿನಿಟಿ ರಿಯಲ್ಕಾನ್ ಲಿಮಿಟೆಡ್ ಹೆಸರಿನಲ್ಲಿ ಒಡಿಶಾದಲ್ಲಿ ಜನರನ್ನು ಆಕರ್ಷಿಸಿ, ಹೆಚ್ಚಿನ ಆದಾಯ ನೀಡುವ ಭರವಸೆ ನೀಡಿ 565 ಕೋಟಿ ರೂ.ಠೇವಣಿಯನ್ನು ಅಕ್ರಮವಾಗಿ […]