ಆಂಧ್ರದದಲ್ಲಿ ಅಪಘಾತ, ಕರ್ನಾಟಕದ ಸಬ್‍ಇನ್‍ಸ್ಪೆಕ್ಟರ್ ಸೇರಿ ಮೂವರ ಸಾವು

ಚಿತ್ತೂರು,ಜು.24- ಡ್ರಗ್ ಪೆಡ್ಲರ್‍ಗಳ ಜಾಡು ಹಿಡಿದು ಕಾರ್ಯಾಚರಣೆಗಿಳಿದಿದ್ದ ಪೊಲೀಸರ ವಾಹನ ಆಂಧ್ರಪ್ರದೇಶದ ಚಿತ್ತೂರಿನ ಹೊರವಲಯದಲ್ಲಿ ಅಪಘಾತಕ್ಕೀಡಾಗಿ ಸಬ್‍ಇನ್‍ಸ್ಪೆಕ್ಟರ್ ಸೇರಿದಂತೆ ಮೂರು ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಬೆಂಗಳೂರಿನ ಶಿವಾಜಿನಗರದ ಪೊಲೀಸ್ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಅವಿನಾಶ್(29), ಕಾನ್‍ಸ್ಟೆಬಲ್ ಅನಿಲ್ ಮುಲ್ಲಿಕ್(26) ಹಾಗೂ ಖಾಸಗಿ ಕಾರಿನ ಚಾಲಕ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್‍ಐ ದೀಕ್ಷಿತ್, ಕಾನ್‍ಸ್ಟೆಬಲ್ ಶರಣಬಸವ ಸೇರಿದಂತೆ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ. ಘಟನೆ ವಿವರ:ಎರಡು ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಡ್ರಗ್ ಪೆಡ್ಲರ್‍ಗಳನ್ನು […]