ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಅಧಿಕಾರ ಸ್ವೀಕಾರ

ವೆಲ್ಲಿಂಗ್ಟನ್, ಜ.25- ಕ್ರಿಸ್ ಹಿಪ್ಕಿನ್ಸ್ ಅವರು ನ್ಯೂಜಿಲೆಂಡ್‍ನ 41 ನೇ ಪ್ರಧಾನ ಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆರ್ಥಿಕತೆ ವೃದ್ದಿ ಮೇಲೆ ಕೇಂದ್ರೀಕರಿಸಿ ಮತ್ತು ಹಣದುಬ್ಬರ ನಿಯಂತ್ರಣ ಮತ್ತು ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವುದಾಗಿ 44ರ ಹರೆಯದ ಹಿಪ್ಕಿನ್ಸ್ ಭರವಸೆ ನೀಡಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಇನ್ನು ಒಂಬತ್ತು ತಿಂಗಳಿಗಿಂತ ಕಡಿಮೆ ಸಮಯದಲ್ಲಿ ಅವರ ಲೇಬರ್ ಪಕ್ಷವು ವರ್ಚಸ್ಸು ಹೆಚ್ಚಿಸಿ ಪ್ರಸ್ತುತ ಎದ್ದಿರುವ ಆಡಳಿತ ವಿರೋಧಿ ಅಲೆಯನ್ನು ನಿಯಂತ್ರಿಸುವ ಕಷ್ಟದ ದಿನಗಳು ಎದುರಾಗಿದೆ. ಇದು ನನ್ನ ಜೀವನದ […]

ನ್ಯೂಜಿಲ್ಯಾಂಡ್‍ಗೆ ಕ್ರಿಸ್ ಹಿಪ್ಕಿನ್ಸ್ ಪ್ರಧಾನಿಯಾಗುವ ಸಾಧ್ಯತೆ

ವೆಲ್ಲಿಂಗ್ಟನ್,ಜ.21- ನ್ಯೂಜಿಲ್ಯಾಂಡ್ ಪ್ರಧಾನಿ ಸ್ಥಾನಕ್ಕೆ ಜಸಿಂಡಾ ಅರ್ಡೆನ್‍ರ ರಾಜೀನಾಮೆ ಘೋಷಣೆ ಬಳಿಕ ಮುಂದಿನ ಪ್ರಧಾನಿ ಸ್ಥಾನದ ರೇಸ್‍ಗೆ ಶಿಕ್ಷಣ ಸಚಿವ ಕ್ರಿಸ್ ಹಿಪ್ಕಿನ್ಸ್ ಪ್ರವೇಶಿಸಿದ್ದಾರೆ. ನಾಳೆ ಲೇಬರ್ ಪಾರ್ಟಿಯ ಪ್ರಮುಖರ ಅನುಮೋದನೆ ಪಡೆಯುವ ಮೂಲಕ ನಾಳೆ ಕ್ರಿಸ್ ಹಿಪ್ಕಿನ್ಸ್ ಪ್ರಧಾನಿಯಾಗುವ ಸಾಧ್ಯತೆಗಳಿವೆ. ಐದೂವರೆ ವರ್ಷಗಳ ಪ್ರಧಾನಿಯಾಗಿದ್ದ ಅರ್ಡೆರ್ನ್ ನಿನ್ನೆ ತಮ್ಮ ರಾಜೀನಾಮೆ ಘೋಷಿಸಿ, 5 ಮಿಲಿಯನ್ ಜನಸಂಖ್ಯೆ ಹೊಂದಿರುವ ದೇಶವನ್ನು ಬೆಚ್ಚಿಬೀಳಿಸಿದರು. ಪ್ರಧಾನಿ ಅಭ್ಯರ್ಥಿ ಕೊರತೆ ಅನುಭವಿಸುತ್ತಿರು ಪರಿಸ್ಥಿತಿಯಲ್ಲಿ ಅರ್ಡೆರ್ನ್ ನಿರ್ಗಮನವಾಗಿದೆ. ಮುಂದಿನ ಬೆಳವಣಿಗೆಯಲ್ಲಿ ಅನೈತಿಕ ರಾಜಕಾರಣ […]