ಹಾಲು ಉತ್ಪಾದನಾ ಘಟಕದಲ್ಲಿ ಕೋಟ್ಯಂತರ ಅವ್ಯವಹಾರ ಸಿಐಡಿ ತನಿಖೆಗೆ ಎನ್.ಆರ್.ರಮೇಶ್ ಆಗ್ರಹ

ಬೆಂಗಳೂರು, ಫೆ.4- ಕನಕಪುರ ಹಾಲು ಉತ್ಪಾದನಾ ಘಟಕದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಿಐಡಿ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಕನಕಪುರ ಹಾಲು ಉತ್ಪಾದನಾ ಕೇಂದ್ರ ಘಟಕದ ನಿರ್ಮಾಣ ಹಾಗೂ ಬಮೂಲ್ ಟ್ರಸ್ಟ್ ಸ್ಥಾಪನೆ ಹೆಸರಿನಲ್ಲಿ ಹತ್ತಾರು ಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ಭ್ರಷ್ಟ ಜನಪ್ರತಿನಿಗಳ ಸಹಕಾರದಿಂದ ಹಲವು ಅಧಿಕಾರಿಗಳು […]