ಸರ್ಕಾರಿ ಸುತ್ತೋಲೆಯಲ್ಲಿ ತರಹೆವಾರಿ ತಪ್ಪುಗಳು : ನೆಟ್ಟಿಗರ ಆಕ್ರೋಶ

ಬೆಂಗಳೂರು,ಜು.16- ಮೊದಲೇ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದ ರಾಜ್ಯ ಸರ್ಕಾರ ಇದೀಗ ಸುತ್ತೋಲೆಯಲ್ಲಿ ಕನ್ನಡದ ವ್ಯಾಕರಣವನ್ನು ತಪ್ಪಾಗಿ ಮುದ್ರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ನಿನ್ನೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೊ ಮತ್ತು ವಿಡಿಯೋ ಚಿಕ್ರೀರಣ ಮಾಡುವುದನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿತ್ತು. ಕೊನೆಗೆ ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ್ದರಿಂದ ತಡರಾತ್ರಿ ಸುತ್ತೋಲೆಯನ್ನು ಹಿಂಪಡೆಯಲಾಗಿದೆ. ಇದೀಗ ಈ ಸುತ್ತೋಲೆಯಲ್ಲೂ ಸಾಕಷ್ಟು ಕನ್ನಡ ವ್ಯಾಕರಣಗಳನ್ನು ತಪ್ಪಾಗಿ ಮುದ್ರಿಸಿ ಕನ್ನಡಿಗರು ಸಿಡಿದೇಳುವಂತೆ ಮಾಡಿದೆ.ಸಾಮಾಜಿಕ ಜಾಲತಾಣಗಳಲ್ಲಂತೂ […]