ಉಗ್ರರಿಂದ ಗ್ರೆನೇಡ್ ದಾಳಿ, 9 ಮಂದಿಗೆ ಗಾಯ

ಶ್ರೀನಗರ,ಆ.22- ಶ್ರೀನಗರದ ನಿಶಾತ್ ಹೊರವಲಯದಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ದಾಲ್ ಸರೋವರದ ದಡದಲ್ಲಿರುವ ಸುಪ್ರಸಿದ್ಧ ಮೊಘಲ್ ಉದ್ಯಾನದ ಮುಂಭಾಗದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಗಾಯಗೊಂಡವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಕಾಶ್ಮೀರ ಪ್ರಾಂತ್ಯದ ಟ್ರಾಲ್‍ನ ಬೀಹ್‍ಗುಂಡ್ ಭಾಗದಲ್ಲಿ ಭದ್ರತಾ ಅಧಿಕಾರಿಗಳು 10 ರಿಂದ 12 […]