ನನಗೆ ಕ್ಲೀನ್‍ಚಿಟ್ ಸಿಕ್ಕಿದೆ, ಸಂಪುಟ ಸೇರುವ ಭರವಸೆಯಿದೆ : ಈಶ್ವರಪ್ಪ

ಬೆಂಗಳೂರು,ಡಿ.20- ನನ್ನ ಮೇಲಿನ ಆರೋಪಕ್ಕೆ ಕ್ಲೀನ್‍ಚಿಟ್ ಸಿಕ್ಕಿದ್ದು, ಸಂಪುಟ ಸೇರ್ಪಡೆ ಭರವಸೆ ಸಿಕ್ಕಿದೆ. ಆದಷ್ಟು ಬೇಗ ಸಂಪುಟಕ್ಕೆ ಸೇರಿಸಿಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ವಾಪಸ್ ನೀಡುವುದಾಗಿ ವರಿಷ್ಟರು ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರದ ಕಾರಣ ಅಸಮಾಧಾನ ಇತ್ತು. ಈಗ ಸಂಪುಟ ಸೇರುವ ಭರವಸೆ ಸಿಕ್ಕಿದೆ. ಹಾಗಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದರು. ನನ್ನ ಜತೆ ರಮೇಶ್‍ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಭರವಸೆ ಮುಖ್ಯಮಂತ್ರಿ […]