ಉಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲ್ಲ: ಪುಟಿನ್

ಮಾಸ್ಕೋ, ಅ.28- ಉಕ್ರೇನ್ ಮೇಲೆ ಪರಮಾಣು ಆಸ್ತ್ರ ಪ್ರಯೋಗಿಸುವ ಯಾವುದೇ ಉದ್ದೇಶವನ್ನು ರಷ್ಯಾ ಹೊಂದಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿಪ್ರಾಯಪಟ್ಟಿದ್ದಾರೆ. ಅಂತರಾಷ್ಟ್ರೀಯ ವಿದೇಶಾಂಗ ನೀತಿ ತಜ್ಞರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಅಂತವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಅವರ ಎಚ್ಚರಿಸಿದರು. ರಷ್ಯಾವನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸಲು ಸಿದ್ದ ಎಂಬ ನಮ್ಮ ಹೇಳಿಕೆಯನ್ನು […]