ಕೊರೊನಾ ಹೆಚ್ಚಿರುವ ಸ್ಥಳಗಳಲ್ಲಿ ಮಾತ್ರ ಶಾಲೆ ಮುಚ್ಚಲು ತೀರ್ಮಾನ

ಬೆಂಗಳೂರು,ಜ.12- ರಾಜ್ಯದಲ್ಲಿನ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಯಥಾರೀತಿ ಮುಂದುವರೆಸುವುದು ಹಾಗೂ ಕೋವಿಡ್ ಸೋಂಕು ಕಂಡುಬಂದಂತಹ ಶಾಲೆಗಳನ್ನು ಮಾತ್ರ ಮುಚ್ಚಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ನಿರ್ದೇಶನ ನೀಡಿದರು. ಭೌತಿಕ ತರಗತಿ ಮುಂದುವರಿಸಲು ಪೋಷಕರ ಒತ್ತಾಯ ಇರುವುದಾಗಿ ಜಿಲ್ಲಾಧಿಕಾರಿಗಳು ಸಚಿವರ ಗಮನಕ್ಕೆ ತಂದಾಗ, ಹೋಬಳಿ ಅಥವಾ ಕ್ಲಸ್ಟರ್ ಮಟ್ಟದಲ್ಲಿ ಅಗತ್ಯವಿದ್ದರೆ ಮಾತ್ರ ಶಾಲೆ ಬಂದ್ ಮಾಡಿ, ಇಡೀ ಜಿಲ್ಲೆ ಬಂದ್ ಮಾಡುವುದು ಬೇಡ ಎಂದರು. ಯಾವುದೇ ಶಾಲೆಯಲ್ಲಿ […]