ಹೆಚ್ಚಿದ ಕೊರೋನಾ, ಜುಲೈ 24 ರವರೆಗೆ ಶಾಲೆಗಳು ಬಂದ್

ಇಂಫಾಲ, ಜು.13 – ಕೊರೊನಾ ಸೋಂಕು ಉಲ್ಬಣವಾಗುತ್ತಿರುವುದರಿಂದ ಮಣಿಪುರ ಸರ್ಕಾರವು ಮುಂದಿನ ವಾರದವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ಶಾಲಾ ಶಿಕ್ಷಣ ಆಯುಕ್ತ ಎಚ್.ಜ್ಞಾನ್ ಪ್ರಕಾಶ ಅವರು ಸರ್ಕಾರಿ ಅಧಿಕೃತ ಆದೇಶದಲ್ಲಿ, ರಾಜ್ಯದಲ್ಲಿ ಕರೋನ ಹೆಚ್ಚಾಗುತ್ತಿದೆ ಸರ್ಕಾರಿ, ರಾಜ್ಯ ಅನುದಾನಿತ, ಇತರ ಮಂಡಳಿಗಳಿಗೆ ಸಂಯೋಜಿತವಾಗಿರುವ ಖಾಸಗಿ ಶಾಲೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಜುಲೈ 24 ರವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚುವಂತೆ ತಿಳಿಸಿದ್ದಾರೆ. ಬೇಸಿಗೆ ರಜೆಯ ನಂತರ ಅನೇಕ ಶಾಲೆಗಳು ಜುಲೈ 16 ರಂದು ಮತ್ತೆ ತೆರೆಯಲು ನಿರ್ಧರಿಸಿತ್ತು […]