ಬೆಂಗಳೂರಲ್ಲಿ ಮತ್ತೆ ಆರಂಭವಾಗಿದೆ ಕ್ಲಸ್ಟರ್ ಜೋನ್‍ಗಳು

\ಬೆಂಗಳೂರು,ಜ.20-ನಗರ ಸೇರಿದಂತೆ ರಾಜ್ಯದೆಲ್ಲೆಡೆ ಸೋಂಕು ಹೆಚ್ಚಳಗೊಳ್ಳುತ್ತಿರುವುದನ್ನು ಮನಗಂಡು ಸರ್ಕಾರ ಮೂರನೆ ಅಲೆಯನ್ನು ತಡೆಗಟ್ಟಲು ಕ್ಲಸ್ಟರ್ ಜೋನ್ ಜಾರಿ ಮಾಡಿ ಆದೇಶ ಹೊರಡಿಸಿದೆ.ಯಾವುದೆ ಒಂದು ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುವ ಪ್ರದೇಶವನ್ನು ಕ್ಲಸ್ಟರ್ ಜೋನ್ ಎಂದು ಪರಿಗಣಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ 50 ಮೀಟರ್ ರೇಡಿಯಸ್‍ನಲ್ಲಿರುವ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ 5ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಂಡರೆ ಅದನ್ನು ಕ್ಲಸ್ಟರ್ ಜೋನ್ ಎಂದು ಪರಿಗಣಿಸಲಾಗುವುದು.ಒಂದು ವೇಳೆ ವಸತಿ ಸಮುಚ್ಚಯಗಳಲ್ಲಿ ಸೋಂಕು ಕಾಣಿಸಿಕೊಂಡರೆ ಸ್ಥಳೀಯ ಆರೋಗ್ಯಾಕಾರಿಗಳ ನಿರ್ಧಾರ […]