ಕರ್ಫ್ಯೂ ಬೇಕಾ..ಬೇಡ್ವಾ..? ನಾಳೆ ಏನಾಗುತ್ತೆ..? ಅಡಕತ್ತರಿಯಲ್ಲಿ ಸಿಎಂ ಬೊಮ್ಮಾಯಿ

ಬೆಂಗಳೂರು, ಜ.20- ಒಂದು ಕಡೆ ಹೆಚ್ಚುತ್ತಿರುವ ಕೋವಿಡ್ ಸೋಂಕು… ಮತ್ತೊಂದು ಕಡೆ ನಿರ್ಬಂಧಗಳಿಗೆ ಉದ್ಯಮ ವಲಯದಿಂದ ವಿರೋಧ… ಇನ್ನೊಂದೆಡೆ ಸ್ವಪಕ್ಷೀಯರಿಂದಲೇ ವಿರೋಧ- ಇದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸದ್ಯದ ಪರಿಸ್ಥಿತಿ..! ಹೀಗಾಗಿ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೆ ಅಕ್ಷರಶಃ ಅವರು ಅಡಕತ್ತರಿಗೆ ಸಿಲುಕಿದ್ದಾರೆ. ಇವುಗಳ ಮಧ್ಯೆ ವೀಕೆಂಡ್ ಕಫ್ರ್ಯೂ ಸೇರಿದಂತೆ ಕೋವಿಡ್ ನಿರ್ಬಂಧಗಳನ್ನು ಹೇರಲು ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ. ಏಕೆಂದರೆ ವಾರಾಂತ್ಯ ಕರ್ಫ್ಯೂಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುತ್ತದೆ. ಬಿಜೆಪಿ ನಾಯಕರಾದ ಕೇಂದ್ರ […]