ಪಂಚರಾಜ್ಯಗಳ ಫಲಿತಾಂಶ : ಸಿಎಂ ಬೊಮ್ಮಾಯಿಗೆ ಸಿಹಿ-ಕಹಿ..!

ಬೆಂಗಳೂರು, ಮಾ.10- ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಸಿಹಿ- ಕಹಿ ಎರಡನ್ನೂ ಉಂಟು ಮಾಡಿದೆ. ಮೇಲ್ನೋಟಕ್ಕೆ ಪಕ್ಷ ಗೆದ್ದಿರುವುದಕ್ಕೆ ಖುಷಿ ಪಡುತ್ತಿದ್ದರೂ ಒಳಗೊಳಗೆ ಫಲಿತಾಂಶವು ತಮ್ಮ ಕುರ್ಚಿಗೆ ಕಂಟಕ ತರಬಹುದು ಎಂಬ ಆತಂಕವೂ ಕಾಡುತ್ತಿದೆ. ಈ ಫಲಿತಾಂಶದಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬೊಮ್ಮಯಿ ನಾಯಕತ್ವ ಬದಲಾವಣೆ ಆಗುವುದೇ ಇಲ್ಲ ಎಂದು ಬಿಜೆಪಿಯ ಯಾವೊಬ್ಬ ನಾಯಕರೂ ಗಟ್ಟಿ ದನಿಯಲ್ಲಿ ಹೇಳುವ ಧೈರ್ಯ ತೋರುತ್ತಿಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದು ಪಂಚರಾಜ್ಯಗಳ […]