ಫೆ.7ರಿಂದ ರಾಜ್ಯ ಬಜೆಟ್ ಪೂರ್ವಭಾವಿ ಸಿದ್ಧತೆ

ಬೆಂಗಳೂರು,ಫೆ.2- ಇದೇ 7ರಿಂದ ಬಜೆಟ್ ಪೂರ್ವಭಾವಿ ಸಿದ್ಧತೆ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಇಲಾಖೆಗಳೊಂದಿಗೆ ಆಯವ್ಯಯ ಪೂರ್ವಭಾವಿ ಸಭೆಗಳನ್ನು ಮುಂದಿನ ವಾರದಿಂದ ನಡೆಸಲಾಗುವುದು ಎಂದು ಹೇಳಿದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದೊರೆಯಲಿರುವ ಸಾಲ ಹಾಗೂ ಅನುದಾನಗಳ ಆಧಾರದ ಮೇಲೆ ರಾಜ್ಯ ಸರ್ಕಾರದ ಆಯವ್ಯಯದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. #ನಾಳೆ ದೆಹಲಿ ಪ್ರವಾಸ: ಆಯವ್ಯಯಕ್ಕೂ ಮುನ್ನ ರಾಜ್ಯದ ಎಲ್ಲಾ ಸಂಸದರೊಂದಿಗೆ ಸಭೆ ಸೇರುವ ವಾಡಿಕೆಯಿದೆ. […]