ಅರಣ್ಯ ವಾಸಿಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ : ಸಿಎಂ

ಸಿರ್ಸಿ, ಜ.15- ಅರಣ್ಯ ವಾಸಿಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ನಿಂದ ನಿರ್ಣಯ ಆಗುವವರೆಗೂ ಅರಣ್ಯ ವಾಸಿಗಳಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದರು. ಪ್ರವಾಹ ಬಂದಾಗ ಅರಣ್ಯ ವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಅರಣ್ಯ ವಾಸಿಗಳಿಗೆ ಪರಿಹಾರ ನೀಡಲು ಕಾನೂನು ಸಮಸ್ಯೆ ಇದ್ದರೂ ಪರಿಹಾರ ಕೊಟ್ಡಿದ್ದೇವೆ. ಅರಣ್ಯ ವಾಸಿಗಳಿಗೆ ಮನೆ, ಜಮೀನು ಕೊಡುವ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಅರಣ್ಯ ವಾಸಿಗಳಿಗೆ ಮೂರು ತಲೆಮಾರು ಬದಲು ಒಂದು ತಲೆಮಾರು ಎಂದು […]